ಮಣ್ಕುಳಿ ಪ್ರೀಮಿಯರ್ ಲೀಗ್ 2026: ಭರ್ಜರಿ ಪ್ರದರ್ಶನದಿಂದ ರಾಯಲ್ ಸಾಮ್ರಾಟ್ ಗೆ ಕಿರೀಟ

ಭಟ್ಕಳ:
ಪ್ರಪ್ರಥಮ ಬಾರಿಗೆ ಎಂ.ಆರ್.ಎಸ್.ಸ್ಪೋರ್ಟ್ಸ್ ಕ್ಲಬ್‌ ಮಣ್ಕುಳಿ ವತಿಯಿಂದ ನಡೆದ ಮಣ್ಕುಳಿ ಪ್ರೀಮಿಯರ್ ಲೀಗ್ 2026ರ “ಚಾಂಪಿಯನ್ ಪಟ್ಟವನ್ನು ನಾಗರಾಜ ಬಾಗಲ್ ಹಾಗೂ ಹರೀಶ ನಾಯ್ಕ ಮಾಲೀಕತ್ವದ “ರಾಯಲ್ ಸಾಮ್ರಾಟ” ತಂಡವು ತನ್ನ ಮುಡಿಗೇರಿಸಿಕೊಂಡಿತು.

ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಪಾಲ್ಕೊಂಡಿದ್ದವು. ಈ ಆರು ತಂಡದ ಮಾಲೀಕರು ತನ್ನೆಲ್ಲ ಆಟಗಾರರನ್ನು ಹಾರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಫೈನಲ್ ಪಂದ್ಯಾವಳಿ ಸಾನ್ವಿ ವಾರಿಯರ್ಸ್ ಹಾಗೂ “ರಾಯಲ್ ಸಾಮ್ರಾಟ” ತಂಡದ ನಡೆಯುವ ಹಣಾಹಣಿ ಏರ್ಪಟಿದ್ದು, ಟಾಸ್ ಗೆದ್ದುಕೊಂಡ “ರಾಯಲ್ ಸಾಮ್ರಾಟ” ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿ ಕಣಕ್ಕಿಳಿದ್ದ ಆರಂಭಿಕ ಜೋಡಿ ಸಂದೀಪ ಹಾಗೂ ದೀಪಕ 100 ರನ್ ಗಳ ಜೊತೆ ಆಟ ನೀಡುವ ಮೂಲಕ ಇಬ್ಬರು ಅರ್ಧ ಶತಕ ಸಿಡಿಸುವುದರ ಮೂಲಕ ತಂಡಕ್ಕೆ ಬ್ರಹತ್ ಮೊತ್ತ ಕಲೆ ಹಾಕಲು ಯಶಸ್ವಿಯಾದರು.

6 ಓವರ್ ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 130 ರನ್ ಗ ಕಲೆ ಹಾಕುವ ಮೂಲಕ ಎದುರಾಳಿ ತಂಡ ಸಾನ್ವಿ ವಾರಿಯರ್ಸ್ ಗೆ 131 ರನ್ ಟಾರ್ಗೆಟ್ ನೀಡಿದ್ದರು. ನಂತರ ಬ್ಯಾಟಿಂಗಗಿಳಿದ ಸಾನ್ವಿ ವಾರಿಯರ್ಸ ತಂಡದ ಆರಂಭಿಕ ಆಟಗಾರ ಮದನ ಹಾಗೂ ಭರತ ಕುಮಾರ ಆರಂಭಿಕ ಅಬ್ಬರದ ಆಟಕ್ಕೆ ಇಬ್ಬರ ವಿಕೆಟ್ ಕಳೆದುಕೊಂಡು ಕ್ರಮವಾಗಿ 28 ಮತ್ತು 19 ರನ್ ಸೇರಿಸಿದರು. ನಂತರ ತಂಡದ ನಾಯಕ ಪವನ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಆರಂಭಿಸಿದ್ದು ಆದರೆ ವಿಫಲಗೊಂಡ ನಾಯಕ ಪವನ ಕೊನೆಯಲ್ಲಿ 42 ರನ್ ಹೊಡೆದು 37 ರನ್ ಗಳ ಅಂತರದಿಂದ ರಾಯಲ್ ಸಾಮ್ರಾಟ್ ತಂಡದೆದರು ಸೋಲನ್ನೊಪ್ಪಿಕೊಂಡಿತು.

ವಿಶೇಷವೆಂದರೆ ರಾಯಲ್ ಸಾರ್ಮಾಟ್ ತಂಡದಲ್ಲಿ ಬಹುತೇಕ ಅನುಭವಿ ಕ್ರಿಕೆಟ್ ಆಟಗಾರರೇ ಇದ್ದು ಅವರ ಅವರ ಅನುಭವವೇ ತಂಡದ ಬಲವಾಗಿದ್ದು ಈ ಬಾರಿಯ ಪ್ರಥಮ ಮಣ್ಕುಳಿ ಪ್ರೀಮಿಯರ್ ಲೀಗ್ -2026 ಟ್ರೋಪಿ ತನ್ನದಾಗಿಸಿಕೊಂಡಿತು.

ಪಂದ್ಯಾವಳಿ ಬೆಸ್ಟ್ ಬ್ಯಾಟ್ಸಮನ್ ಆಗಿ ಡಿ ಸ್ಟಾರ್ ತಂಡದ ಆಟಗಾರ ಗುರುದತ್ತ ತೆಂಗೇರಿ, ಬೆಸ್ಟ್ ಬೌಲರ್ ಆಗಿ ರಾಮದೂತ ಸ್ಕ್ವಾಡ್ ತಂಡ ಗಣೇಶ ಹೆಗಡೆ, ಸರಣಿ ಶ್ರೇಷ್ಠ ಆಟಗಾರನಾಗಿ ಸಾನ್ವಿ ವಾರಿಯರ್ಸ್ ತಂಡದ ನಾಯಕ ಪವನ್ ನಾಯಕ ಆಯ್ಕೆಯಾದರು.

ವಿಜೇತ ರಾಯಲ್ ಸಾಮ್ರಾಟ್ ತಂಡಕ್ಕೆ 33,333 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ ಅಪ್ ತಂಡವಾದ ಸಾನ್ವಿ ವಾರಿಯರ್ಸ್ ಗೆ 22,222 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿದರು.

ಬಳಿಕ ಮಣ್ಕುಳಿ ಪ್ರೀಮಿಯರ್ ಲೀಗ್ 2026ರ ಆಯೋಜಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ 6 ತಂಡದ ಮಾಲೀಕರಿಗೆ, ಎಲ್ಲಾ ತಂಡದ ಆಟಗಾರರಿಗೆ, ಸಂಸ್ಥೆಯ ಸದಸ್ಯರಿಗೆ, ಊರಿನ ಹಿರಿಯ ಮುಖಂಡರಿಗೆ,ಮತ್ತು ಪಂದ್ಯಾವಳಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಧನ್ಯವಾದ ಸಲ್ಲಿಸಿದರು.