ಮುರುಡೇಶ್ವರ ಶಿವ–ರಾಜಗೋಪುರ ಒಂದೇ ಚಿತ್ರದಲ್ಲಿ ಜೀವಂತ: ಹೈದರಾಬಾದ್ ಕಲಾವಿದೆಯ ಕಲಾ ಮಂತ್ರ

ಭಟ್ಕಳ :

ಹೈದರಾಬಾದ್ ಮೂಲದ ವಂದನ ಎಂಬ ಮಹಿಳೆ ರಚಿಸಿರುವ ಮಹಾ ಮುರುಡೇಶ್ವರ ಹಾಗೂ ರಾಜಗೋಪುರದ ಅದ್ಭುತ ಚಿತ್ರಕಲೆ ಭಕ್ತರ ಮನಸೂರೆಗೊಂಡಿದೆ.


ಮಹಾ ಮುರುಡೇಶ್ವರ ಶಿವನ ಭವ್ಯ ಪ್ರತಿಮೆ ಹಾಗೂ ದೇವಸ್ಥಾನದ ರಾಜಗೋಪುರವನ್ನು ಒಂದೇ ಚಿತ್ರಪಟದಲ್ಲಿ ಆಕರ್ಷಕವಾಗಿ ಮೂಡಿಸಿರುವುದು ಈ ಕೃತಿಯ ವಿಶೇಷತೆ. ಚಿತ್ರದಲ್ಲಿ ಮುರುಡೇಶ್ವರ ದೇವಾಲಯದ ಮಹಾದೇವನ ಮೂರ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವುದು ಗಮನ ಸೆಳೆಯುತ್ತದೆ.


ಇನ್ನೊಂದೆಡೆ, ರಾಜಗೋಪುರದ ಕಲಾತ್ಮಕ ವಿನ್ಯಾಸವನ್ನೂ ಸೂಕ್ಷ್ಮ ರೇಖಾಚಿತ್ರಗಳ ಮೂಲಕ ಮನೋಜ್ಞವಾಗಿ ಮೂಡಿಸಲಾಗಿದೆ. ವಂದನ ಅವರ ಈ ಚಿತ್ರಕಲೆ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸುವುದರ ಜೊತೆಗೆ, ಕಲಾ ಪ್ರೇಮಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.