ಹೊನ್ನಾವರ :
ತಾಲ್ಲೂಕಿನ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಡಯಾಲಿಸಿಸ್ ವಿಭಾಗ ಇದೆ ಏಪ್ರಿಲ್ 18 ಶನಿವಾರದಿಂದ ಆರಂಭವಾಗಲಿದ್ದು ಇದರ ಸದುಪಯೋಗವನ್ನು ಹೆಚ್ಚಿನ ಜನರು ಪಡೆದುಕೊಳ್ಳುವಂತೆ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಬಂದರು ರಸ್ತೆಯಲ್ಲಿರುವ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಒಂದು ಅತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ. ಅತ್ಯಾಧುನಿಕ ಸೌಕರ್ಯಗಳು ಮತ್ತು ಸಲಕರಣೆಗಳನ್ನು ಹೊಂದಿರುವ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡ ಮತ್ತು ಸಿಬ್ಬಂದಿಗಳನ್ನು ಒಳಗೊಂಡು ಜಿಲ್ಲೆಯ ಜನರಿಗೆ ಉನ್ನತ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಾ ಬಂದಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದೆ.


ಹೊನ್ನಾವರ ಭಾಗದಲ್ಲಿ ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ಅವರಿಗೆ ಬೇರೆ ಕಡೆ ಹೋಗಲು ಕಷ್ಟವಾಗುವ ದೃಷ್ಟಿಯಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಉಪಯೋಗವಾಗುವಂತೆ ಬೇರೆ ಕಡೆ ಹೋಗಲು ಆಗುವ ಖರ್ಚು ವೆಚ್ಚಗಳನ್ನೂ ಕಡಿಮೆ ಮಾಡುವ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವಿಭಾಗವನ್ನು ಪ್ರಾರಂಭಿಸಲಾಗಿದೆ. ಹಾಗೆಯೆ ಇಲ್ಲಿ ಒಂದು ಉಪಯೋಗ ಇಲ್ಲಿ ಬರುವ ರೋಗಿಗಳು ಯಾವುದಾದರು ಸೇವಾ ಚಟುವಟಿಕೆಗಳ ಕ್ಲಬ್ ಗಳಿಂದ ಪತ್ರ ತಂದರೆ ಅವರಿಗೆ 20ರಿಂದ 30% ರಿಯಾಯಿತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು ಮತ್ತು ನಮ್ಮ ಆಸ್ಪತ್ರೆಯ ಖಾಯಂ ರೋಗಿಗಳ ಯಾವುದಾದರು ಇನ್ಸೂರೆನ್ಸ್ ಇದ್ದರೆ ಅವರಿಗೂ ಇದು ಅನ್ವಯವಾಗುವುದು. ಹಾಗೆಯೇ ಸಂಪೂರ್ಣ ಸುರಕ್ಷಾ ಕಾರ್ಡ್ ಇದ್ದವರಿಗೆ ಡಯಾಲಿಸಿಸ್ ಚಿಕಿತ್ಸೆ ಉಚಿತವಾಗಿ ನೀಡಲಾಗುವುದು. ತಾಲ್ಲೂಕಿನ ಹಾಗೂ ಸುತ್ತಮುತ್ತ ಭಾಗದ ಹೆಚ್ಚಿನ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಆಸ್ಪತ್ರೆಯ ಪರವಾಗಿ ಡಾ.ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.

ನಮ್ಮ ಆಸ್ಪತ್ರೆಯ ಹೊಸ ಕೊಠಡಿಯನ್ನು ನಿರ್ಮಿಸಲಾಗಿದ್ದು ಸ್ಪೆಷಲ್ ವಾರ್ಡ್ AC ರೂಮ್ಸ್ ಉತ್ತಮ ಸೌಕರ್ಯ ಹೊಂದಿದ್ದು ಆರೋಗ್ಯ ಸೇವೆಯನ್ನು ಗುಣಾತ್ಮಕ ಮತ್ತು ಸುಲಭಗೊಳಿಸುವ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ನಿಮಗೆ ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ನಿಯಮಿತ ತಪಾಸಣೆಗಳು ಅಥವಾ ವಿಶೇಷ ಚಿಕಿತ್ಸೆಯ ಅಗತ್ಯವಿರಲಿ, ನಿಮ್ಮ ಆರೋಗ್ಯ ಅಗತ್ಯಗಳನ್ನು ಪೂರೈಸಲು ನಾವು ಇಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

