ಹೊನ್ನಾವರ:
ಪಟ್ಟಣದ ಕೊಂಕಣ ಖಾರ್ವಿ ಸಮಾಜ ಅಭಿವೃದ್ಧಿ ಸಂಘ ಕೆಳಗಿನಪಾಳ್ಯ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಪೂಜಾ ಕಾರ್ಯಕ್ರಮ ಪಟ್ಟಣದ ಕೆಳಗಿನಪಾಳ್ಯದ ಸಮಾಜ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಶ್ರದ್ದಾಭಕ್ತಿಯಿಂದ ನಡೆಯಿತು.

ಕೊಂಕಣಖಾರ್ವಿ ಸಮಾಜದ ಹಾಗೂ ಊರಿನ ಅಭಿವೃದ್ದಿಗಾಗಿ 13 ವರ್ಷದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಳಸ ಸ್ಥಾಪನೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಾಜಿ ಪ.ಪಂ.ಅಧ್ಯಕ್ಷ ಸಮಾಜದ ಮುಖಂಡರಾದ ಶಿವರಾಜ ಮೇಸ್ತ ದಂಪತಿಗಳು ಪೂಜೆ ನೇರವೇರಿಸಿದರು. ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು, ಚಲನಚಿತ್ರ ನಟ ಸಂಕೇತ ಖಾರ್ವಿ ಇವರನ್ನು ಸನ್ಮಾನಿಸಿದರು.

ಈ ವೇಳೆ ಶಾಸಕ ದಿನಕರ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕಾ, ಸೂರಜ್ ನಾಯ್ಕ ಸೋನಿ, ಮಂಜುನಾಥ ನಾಯ್ಕ, ನ್ಯಾಯವಾದಿ ವಿಕ್ರಂ ನಾಯ್ಕ, ಜಗದೀಪ್ ತೆಂಗೇರಿ, ಸಂದೇಶ ಶೆಟ್ಟಿ, ಡಾ. ಆಶಿಕ್ ಹೆಗಡೆ ಇನ್ನಿತರ ಪ್ರಮುಖರು, ಕೊಂಕಣ ಖಾರ್ವಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

