ಎನ್.ಕ್ಯೂ.ಎ.ಎಸ್ ಪ್ರಕ್ರಿಯೆಯಲ್ಲಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದ ಹೊನ್ನಾವರ ತಾಲೂಕ ಆಸ್ಪತ್ರೆ ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟವನ್ನು ಉತ್ತಮ ಪಡಿಸುವ ಉದ್ದೇಶದಿಂದ ಭಾರತ ಸರಕಾರ ಜಾರಿಗೆ ತಂದಿರುವ ಎನ್.ಕ್ಯೂ.ಎ.ಎಸ್. ಪ್ರಕ್ರಿಯೆಯಲ್ಲಿ ಹೊನ್ನಾವರ ತಾಲೂಕ ಆಸ್ಪತ್ರೆ ಶೇಕಡ 80ಕ್ಕೂ ಹೆಚ್ಚಿನ ಅಂಕ ಪಡೆದು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಕ್ರಿಯೆಗೆ ಒಳಗಾಗಲಿದೆ.

ಎನ್.ಕ್ಯೂ.ಎ.ಎಸ್ ಎನ್ನುವುದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಿಸಲು ರೂಪಿಸಿರುವ “ರಾಷ್ಟಿçÃಯ ಗುಣಮಟ್ಟದ ಭರವಸೆಯ ಮಾನದಂಡಗಳು” (National Quality Assurance Standards-NQAS) ಸಮಗ್ರ ಮಾನ್ಯತಾ ಪ್ರಕ್ರಿಯೆಯಾಗಿದ್ದು ಇದರಲ್ಲಿ ಅರ್ಹತೆ ಪಡೆದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆಯಿಂದ ತಜ್ಷರನ್ನು ಒಳಗೊಂಡ ಒಂದು ತಂಡ ಆಸ್ಪತ್ರೆಗೆ ಬಂದು ವಿವಿಧ ವಿಭಾಗಗಳ ಸೇವಾ ಕಾರ್ಯವನ್ನು ಅವಲೋಕಿಸಿ, ವಿಶ್ಲೇಷಿಸಿ, ಸಿಬ್ಬಂಧಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸಿ, ಅಂಕಗಳನ್ನು ನೀಡುತ್ತದೆ.
ಈ ಮಾನ್ಯತೆ ಪಡೆಯುವ ಪ್ರಕ್ರಿಯೆ ಕಠಿಣವಾಗಿದ್ದು ಇಡಿ ಆಸ್ಪತ್ರೆಯ ಕಾರ್ಯಕ್ಷಮತೆಯನ್ನು ವಿವಿಧ ಅಂಕಿಅಂಶಗಳು ಮತ್ತು ರೋಗಿಗಳಿಗೆ ನೀಡುತ್ತಿರವ ಸೇವೆಗಳ ಆಧಾರದ ಮೇಲೆ ವಿಶ್ಲೇಷಿಸಲಾಗುತ್ತದೆ. ಈ ಒಂದು ಕಠಿಣ ಪ್ರಕ್ರಿಯೆಯಲ್ಲಿ ಹೊನ್ನಾವರ ತಾಲೂಕ ಆಸ್ಪತ್ರೆ ಅರ್ಹತೆ ಪಡೆದಿರುವುದು ಗಮನಾರ್ಹವಾಗಿದೆ. ಈ ಎನ್.ಕ್ಯೂ.ಎ.ಎಸ್. ಪ್ರಕ್ರಿಯೆಯಲ್ಲಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿರುವುದಕ್ಕೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶ ಕಿಣಿ ಸಂತೋಷ ವ್ಯಕ್ತಪಡಿಸುತ್ತಾ “ಈ ಅರ್ಹತೆ ಪಡೆಯಲು ಆಸ್ಪತ್ರೆಯ ಸಮಸ್ತ ವೈದ್ಯಾಧಿಕಾರಿಗಳು ಮತ್ತ ಸಿಬ್ಬಂಧಿ ವರ್ಗದವರ ಪರಿಶ್ರಮವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ. ಈ ಅರ್ಹತಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿರುವುದಕ್ಕೆ ಕಾರಣಿಕರ್ತರಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ
