ಅಲಂಕಾರ, ಆರಾಧನೆ, ಅನ್ನಸಂತರ್ಪಣೆ— ಹೊನ್ನಾವರದ ಶಾರದಾಂಬಾ ದೇವಿ ವರ್ಧಂತಿ ಮಹೋತ್ಸವ ಭಕ್ತರ ಸಾಗರದಲ್ಲಿ ವಿಜೃಂಭಣೆ

ಹೊನ್ನಾವರದಲ್ಲಿ ಶಾರದಾಂಬಾ-ಚಂದ್ರಮೌಳೇಶ್ವರ ದೇವರ 143ನೇ ವರ್ಧಂತಿ ಮಹೋತ್ಸವ ವಿಜೃಂಭಣೆ :

ಏಪ್ರಿಲ್ 07, ಮಂಗಳವಾರ-

ಹೊನ್ನಾವರ ಪಟ್ಟಣದ ರಥಬೀದಿ ಚಾರೋಡಿ ಮೇಸ್ತ ಸಮಾಜದ ಶ್ರೀ ಶಾರದಾಂಬಾ ದೇವಿ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವರ್ಧಂತಿ ಮಹೋತ್ಸವ ಪೂಜಾ ಕಾರ್ಯಕ್ರಮ ಸಾವಿರಾರು ಭಕ್ತ ಸಮೂಹದಲ್ಲಿ ಶ್ರದ್ಧಾಭಕ್ತಿ ವಿಜೃಂಭಣೆಯಿಂದ ಜರುಗಿತು…

ಸ್ವತಃ ಜಗನ್ಮಾತೆಯೇ ತನ್ನ ಇಚ್ಚೆಗನುಗುಣವಾಗಿ ತನ್ನ ಭಕ್ತರಿಂದಲೇ ನಡೆಸಿಕೊಂಡ ಕಾರ್ಯಕ್ರಮವೇ ಹೊರತು. ಇದು ಮನುಷ್ಯ ಮಾತ್ರರಿಂದ ಸಾದ್ಯವಾದ ಕೆಲಸವಲ್ಲ. ಹೌದು… ಹೊನ್ನಾವರ ಪಟ್ಟಣದ ಹೃದಯ ಭಾಗ ರಥಭೀದಿಯಲ್ಲಿರುವ ಕರಾವಳಿಯ ಏಕೈಕ ಶ್ರೀ ಶಾರದಾಂಬಾ ದೇವಿ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಮಹಾಪೂಜೆ

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/X6INPHCTHmc

ಸ್ವರ್ಣಪುರವೆನಿಸಿಕೊಂಡಿರುವ ನಮ್ಮ ಹೊನ್ನಾವರದ ಇತಿಹಾಸದಲ್ಲಿ ಕಂಡು ಕೇಳರಿಯದ ಧಾರ್ಮಿಕ ಕಾರ್ಯಕ್ರಮವಾಗಿ, ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅದ್ಭುತವಾಗಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ವಿದುಶೇಖರ ಭಾರತೀತೀರ್ಥ ಮಹಾ ಸ್ವಾಮಿಗಳಿಂದ ಕಳೆದ ವರ್ಷ ಲೋಕಾರ್ಪಣೆಗೊಂಡ ನೂತನ ಶಿಲಾಮಯ ದೇವಸ್ಥಾನದಲ್ಲಿ ವಿರಾಜಮಾನರಾಗಿರುವ ಶ್ರೀ ಶಾರದಾಂಬಾ ದೇವಿ ಹಾಗೂ ಶ್ರೀ ಚಂದ್ರಮೌಳೀಶ್ವರ ದೇವರ 143ನೇ ವರ್ಧಂತಿ ಉತ್ಸವ ಹಾಗೂ ಶ್ರೀ ಚೌಡೇಶ್ವರಿ ಹಾಗೂ ಶ್ರೀ ನಾಗದೇವರ ವರ್ಧಂತಿ ಮಹೋತ್ಸವ ಭಕ್ತ ಸಮೂಹದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು…

ಶಿಲಾಮಯ ದೇವಸ್ಥಾನವನ್ನು ತಳಿರು ತೋರಣಗಳಿಂದ ಬಗೆಬಗೆಯ ಹೂವುಗಳಿಂದ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಶಾರದಾಂಬಾ ದೇವಿಗೆ ಹಾಗೂ ಚಂದ್ರಮೌಳೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆ ಸಾನಿಧ್ಯದಲ್ಲಿ ಸಪ್ತಕಲಾ ಹೋಮ, ಪೂರ್ಣಾಹುತಿ, ದೇವರಿಗೆ ಸಪ್ತಕಲಶ ಅಭಿಷೇಕ, ದೇವರಿಗೆ ಅಲಂಕಾರ ಮತ್ತು ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ವಿಶೇಷವಾಗಿ ನೂತನ ಉತ್ಸವ ಮೂರ್ತಿಯ ಪೂಜೆ ಶಾಸ್ತ್ರೋಕ್ತವಾಗಿ ಜರುಗಿತು…

ಸಾವಿರಾರು ಭಕ್ತರು ಜಗನ್ಮಾತೆ ಶ್ರೀ ಶಾರದಾಂಬಾ ಹಾಗೂ ಚಂದ್ರಮೌಳೇಶ್ವರ ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಕೃತಾರ್ಥರಾದ್ರು….

ಮಹಾಪೂಜೆ

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/X6INPHCTHmc

ಸಂಜೆ ಮಕ್ಕಳಿಂದ ಭರತ ನಾಟ್ಯ, ಯಕ್ಷಗಾನ, ದೇವತಾ ನೃತ್ಯ, ಹಾಡು, ಭಜನೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಮಹಾಪೂಜೆ

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/X6INPHCTHmc