ನಿಗದಿತ ಸಮಯಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಇಲ್ಲವೇ? ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಳ

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಿಗದಿತ ವೇಳೆಗೆ ಪ್ರಕಟವಾಗುವ ಕುರಿತು ಅನುಮಾನ ವ್ಯಕ್ತವಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ (ನಾಳೆ) ಫಲಿತಾಂಶ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಇದ್ದರೂ, ಕೆಲವು ಕಾರಣಗಳಿಂದ ಅದು ಸಾಧ್ಯವಾಗುವುದಿಲ್ಲ ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. 

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ!

ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕ ಮುಂದೂಡಲ್ಪಟ್ಟಿದೆ. ಇದು ಮುಂದಿನ ಉನ್ನತ ಶಿಕ್ಷಣಕ್ಕೆ ದಾಖಲಾಗಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ತುಸು ಆತಂಕ ಮೂಡಿಸಿದೆ ಎನ್ನಲಾಗಿದೆ.

ಇನ್ನು ಪ್ರಕಟ ಆಗುವ ಫಲಿತಾಂಶವನ್ನು ನೋಡುವುದು ಹೇಗೆ ಎಂಬ ಗೊಂದಲಗಳು ವಿದ್ಯಾರ್ಥಿಗಳಿಗೆ ಇರಬಹುದು. ಅದಕ್ಕೆ ಭಯಬೇಡ, ಇಲ್ಲಿ ನೀಡಿರುವ ಲಿಂಕ್​​​ಗಳನ್ನು ಓಪನ್​ ಮಾಡಿ ನೋಡಿದ್ರೆ ಸಾಕು. karresults.nic.in ಮತ್ತು kseab.karnataka.gov.in ಅನ್ನು ಶಿಕ್ಷಣ ಇಲಾಖೆ ನೀಡಿದೆ. ಒಂದು ವೇಳೆ ಈ ಲಿಂಕ್​​ಗಳಲ್ಲಿ ದೋಷ ಬಂದರೆ, ಇನ್ನು ಆಯ್ಕೆಯನ್ನು ಕೂಡ ನೀಡಲಾಗಿದೆ. PUC ಫಲಿತಾಂಶಗಳನ್ನು ಡಿಜಿಲಾಕರ್ ವೆಬ್‌ಸೈಟ್ – digilocker.gov.in ನಲ್ಲಿಯೂ ಪರಿಶೀಲಿಸಲು ಅವಕಾಶವನ್ನು ನೀಡಲಾಗಿದೆ.

ಕಳೆದ ವರ್ಷ ಏಪ್ರಿಲ್ 8 ರಂದು ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಘೋಷಿಸಲಾಯಿತು, ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದಿತ್ತು. ಈ ಬಾರಿಯೂ ಅದೇ ಸಮಯದಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪಿಯುಸಿ ಫಲಿತಾಂಶ 2026:

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಅನ್ನು ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಬಹುದು :

ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ

ಸಲ್ಲಿಸು ಮೇಲೆ ಕ್ಲಿಕ್ ಮಾಡಿ

ಒಂದು ವೇಳೆ ನಿಮಗೆ ಫಲಿತಾಂಶ ಕಾಪಿ ಬೇಕಂದರೆ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಡಿಜಿಲಾಕರ್‌ನಲ್ಲಿಯೂ ಪಿಯುಸಿ ಫಲಿತಾಂಶ :

ಏಪ್ರಿಲ್ 3 ರಂದು ಡಿಜಿಲಾಕರ್ ಪೋಸ್ಟ್‌ನಲ್ಲಿ ಹೀಗೆ ಹೇಳಲಾಗಿದೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, 2026ನೇ ತರಗತಿಯ ದ್ವಿತೀಯ ಪಿಯುಸಿ ಫಲಿತಾಂಶಗಳು ಶೀಘ್ರದಲ್ಲೇ ಡಿಜಿಲಾಕರ್‌ನಲ್ಲಿ ಲಭ್ಯವಿರುತ್ತವೆ.

ಇಲ್ಲಿ ಯಾವುದಕ್ಕೂ ಕಾಯುವುದು ಬೇಡ ಹಾಗೂ ಇದಕ್ಕೆ ಹೆಚ್ಚಿನ ದಾಖಲೆಗಳು ಕೂಡ ಬೇಡ. ಸುಲಭವಾಗಿ ಹಾಗೂ ಸುರಕ್ಷಿತವಾಗಿ ಫಲಿತಾಂಶವನ್ನು ನೀಡಬಹುದು. ನಿಮ್ಮ ಫಲಿತಾಂಶಗಳನ್ನು digilocker.gov.in ನಲ್ಲಿ ತಕ್ಷಣವೇ ಪರಿಶೀಲಿಸಲು ಸಿದ್ಧರಾಗಿರಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಹೇಳಿದೆ.

ಇದರಲ್ಲಿ ಬರುವ ಫಲಿತಾಂಶವು ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ, ವಿಷಯಗಳ ಹೆಸರುಗಳು ಮತ್ತು ಪ್ರತಿ ವಿಷಯದಲ್ಲಿ ಪಡೆದ ಅಂಕಗಳಂತಹ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ. ಇದು ಒಟ್ಟು ಅಂಕಗಳು ಮತ್ತು ಒಟ್ಟಾರೆ ಫಲಿತಾಂಶದ ಸ್ಥಿತಿಯನ್ನು ಸಹ ತೋರಿಸುತ್ತದೆ, ಪರೀಕ್ಷೆಯಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆಯ ಸಂಪೂರ್ಣ ಅವಲೋಕನವನ್ನು ಒದಗಿಸುತ್ತದೆ.