ಸೊಂದಾದ ಜೈನ ಮಠದಲ್ಲಿ ಭೂಮಿಪೂಜೆ: ಬಸದಿಯ ಜೀರ್ಣೋದ್ಧಾರಕ್ಕೆ ಚಾಲನೆ

ಶಿರಸಿ:
ತಾಲೂಕಿನ ಸೊಂದಾ ಗ್ರಾಮದ ಸ್ವಾದಿ ದಿಗಂಬರ ಜೈನ ಮಠದ ಸಮುದಾಯ ಭವನದ ಭೂಮಿಪೂಜೆ ಹಾಗೂ ರಾಯರಪೇಟೆಯ ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯ ಜೀರ್ಣೋದ್ಧಾರ ಕಾರ್ಯದ ಉದ್ಘಾಟನೆಯನ್ನು ಶಾಸಕ ಭೀಮಣ್ಣ ಟಿ. ನಾಯ್ಕ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಧಾರ್ಮಿಕ ಕೇಂದ್ರಗಳು ಸಮಾಜದ ಶಾಂತಿ ಮತ್ತು ಸಂಸ್ಕಾರದ ಕೇಂದ್ರಗಳಾಗಿವೆ. ಜೈನ ಮಠ ಹಾಗೂ ಬಸದಿಗಳ ಅಭಿವೃದ್ಧಿಯು ಸಾಮಾಜಿಕ ಒಕ್ಕೂಟವನ್ನು ಬಲಪಡಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.


ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.

ಈ ಸಂದರ್ಭದಲ್ಲಿ ಮಠದ ಪದಾಧಿಕಾರಿಗಳು, ಜೈನ ಸಮಾಜದ ಪ್ರಮುಖ ಚಂದ್ರರಾಜ ಜೈನ್, ಮಹಾವೀರ ಜೈನ್ ಇತರರು ಹಾಗೂ ಸೊಂದಾ ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.