ಹೊನ್ನಾವರ ಬಿಜೆಪಿ ಮಂಡಲಕ್ಕೆ ಯೋಗೇಶ್ ಮೇಸ್ತ ಪದಗ್ರಹಣ

ಹೊನ್ನಾವರ :
ತಾಲ್ಲೂಕಿನ ದುರ್ಗಾಕೇರಿಯ ದಂಡಿನ ದುರ್ಗಾ ಸಭಾಭವನದಲ್ಲಿ ಶನಿವಾರ ಹೊನ್ನಾವರ ಬಿಜೆಪಿ ಮಂಡಲದ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭ ಕಾರ್ಯಕ್ರಮ ನಡೆಯಿತು.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/5wP7XDUsWnI

ನೂತನ ಮಂಡಲಾಧ್ಯಕ್ಷರಾದ ಯೋಗೇಶ್ ಮೇಸ್ತ ಅವರಿಗೆ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಂಡಲದ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖಂಡರು, ಶಕ್ತಿಕೇಂದ್ರ-ಮಹಾಶಕ್ತಿಕೇಂದ್ರದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಶುಭಕೋರಿದರು.

ನೂತನ ಅಧ್ಯಕ್ಷರಿಗೆ ಶುಭಕೋರಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಪ್ರತಿಯೊಬ್ಬರು ಪಕ್ಷದ ಗೆಲವು, ಬೆಳವಣಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದು,’ಸುಧಾರಣೆ-ಕಾರ್ಯನಿರ್ವಹಣೆ-ಪರಿವರ್ತನೆ’ ಮಂತ್ರದೊಂದಿಗೆ ಆರ್ಥಿಕ ಸ್ಥಿರತೆ ಸಾಧಿಸಿದೆ. ಸಂಘರ್ಷದ ಸಂದರ್ಭದಲ್ಲೂ ಭಾರತದ ಹಿತಾಸಕ್ತಿ, ನಾಗರಿಕರ ಸುರಕ್ಷತೆ ಮತ್ತು ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಸಿಗುವ ಗೌರವ ಬೇರೆ ಯಾವುದೇ ಪಕ್ಷದಲ್ಲಿ ಸಿಗುವುದಿಲ್ಲ. ಮುಂದಿನ ದಿನದಲ್ಲಿ ಪಕ್ಷ ಸಂಘಟನೆಯ ಬಲವರ್ಧನೆ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಬೇಕು, ಸಮಗ್ರ ಅಭಿವೃದ್ಧಿಗೆ ಎಲ್ಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಒಗ್ಗೂಡಿ ಸಂಘಟನೆ ಮಾಡಲು ಶ್ರಮಿಸೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಏನ್.ಎಸ್.ಹೆಗಡೆ ಮಾತನಾಡಿ ಹಿರಿಯರ ಒಮ್ಮತದ ಮೇರೆಗೆ ಯೋಗೇಶ್ ಮೇಸ್ತ ಅವರ ಅನುಭವ ಹಾಗೂ ಇನ್ನಷ್ಟು ಮಾನದಂಡವನ್ನು ಪರಿಗಣಿಸಿ ಹಿರಿಯರ ಸೂಚನೆಯಂತೆ ಹೊನ್ನಾವರ ಮಂಡಲದ ನೂತನ ಮಂಡಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಹಾಗೆಯೇ ಸಂಘಟನೆ ಬಲಪಡಿಸುವುದರ ಜೊತೆಗೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವುದು ಅನಿವಾರ್ಯ ಎಂದು ಹೇಳಿದರು.

ನೂತನ ಮಂಡಲಾಧ್ಯಕ್ಷರಾದ ಯೋಗೇಶ್ ಮೇಸ್ತ ಅವರು ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದರು. ಮುಂದಿನ ದಿನದಲ್ಲಿ ಪಕ್ಷ ಸಂಘನೆಗೆ ಬಲಪಡಿಸೋಣ ಎಂದು ಹೇಳಿದರು.


ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ನಾಯ್ಕ, ನಿಕಟಪೂರ್ವ ಮಂಡಲ ಅಧ್ಯಕ್ಷ ರಾಜೇಶ್ ಬಂಡಾರಿ ವಿಶೇಷ ಆಹ್ವಾನಿತ ಶಿವಾನಂದ ಹೆಗಡೆ ಮಾತನಾಡಿದರು.

ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ
👇👇👇👇👇👇👇👇👇
https://youtu.be/5wP7XDUsWnI