ಮೊಸಳೆಗಳ ಕುರಿತು ಅರಣ್ಯ ಇಲಾಖೆಯಿಂದ ಜನ ಜಾಗೃತಿ ಕಾರ್ಯಕ್ರಮ

ದಾಂಡೇಲಿ: ಕಾಳಿ ನದಿಯಲ್ಲಿ ಮೊಸಳೆಗಳು ಮಾನವರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳ ನಡುವೆಯೇ
ಅರಣ್ಯ ಇಲಾಖೆಯಿಂದ ಮೊಸಳೆಗಳ ಕುರಿತು ನದಿಯ ದಂಡೆಯ ಪ್ರದೇಶದಲ್ಲಿ ಶನಿವಾರ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.

ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಹತ್ತಿರದ ನದಿಯ ದಂಡೆಯ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ದಾಂಡೇಲಿ ವಲಯ ಅರಣ್ಯಾಧಿಕಾರಿ ಅಪ್ಪಾರಾವ ಕಲಶೆಟ್ಟಿ ಮಾತನಾಡಿ, ಕಾಳಿ ನದಿಯಲ್ಲಿನ ಮೊಸಳೆಗಳ
ವರ್ತನೆ ಬದಲಾಗಿರುವುದರಿಂದ ಜನ ಸಾಮಾನ್ಯರು ಆದಷ್ಟು ಎಚ್ಚರಿಕೆಯಿಂದ ಇರಬೇಕು ಮತ್ತು ತಮ್ಮ ಜೀವನಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ನದಿಯ ನೀರಿನ ಬಳಕೆಗಾಗಿ ದಂಡೆಗೆ ಹೋಗುವುದನ್ನು ನಿಲ್ಲಿಸಬೇಕು. ಈ ವಿಷಯದಲ್ಲಿ ಸಾರ್ವಜನಿಕರು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಜಾಗೃತಿವಹಿಸಿ
ಮೊಸಳೆಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಬಹುದು. ಅದರಂತೆ ನದಿಯ ಇನ್ನುಳಿದ ಭಾಗಗಳಿಗೂ ಬೇಲಿ ಅಳವಡಿಸಲಾಗುವುದು ಎಂದರು.

ನಗರಸಭಾ ಸದಸ್ಯ ರೋಷನ್ ಜೀತ್ ಮಾತನಾಡಿ, ಪಾತ್ರೆ ತೊಳೆಯಲು ಬರುವ ಮಹಿಳೆಯರು ನದಿಯಲ್ಲಿ ಆಹಾರ
ಪದಾರ್ಥಗಳನ್ನು ಚೆಲ್ಲಬಾರದು. ಗಣೇಶ ಚತುರ್ಥಿ ಆಗಮಿಸುತ್ತಿರುವುದರಿಂದ ಗಣಪತಿ ಸಂದರ್ಭದಲ್ಲಿ
ಇಲಾಖೆಯಿಂದ ವಿಸರ್ಜನೆಗೆ ಪೊಲೀಸರು ಸೂಕ್ತ ಭದ್ರತೆ ನೀಡಬೇಕೆಂದು.

ಗಣೇಶ ಕಾಮತ, ಅನಿಲ ಕೊಲೂರ, ಸಂಭಾಜಿ, ವಿನೋರ್ಲಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ, ದಾಂಡೇಲಿ ವಲಯ ಅರಣ್ಯಾಧಿಕಾರಿ ಸಂದೀಪ ನಾಯ್ಕ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.