ಕೊಂಕಣಿ ನಾಟಕ ಸ್ಪರ್ಧೆ ಸಂಪನ್ನ-ಫಲಿತಾಂಶ

ಹೊನ್ನಾವರ ನ. ೧೯: ಪ್ರತಿಭೋದಯದ ಶರಾವತಿ ಕಲಾ ಮಂದಿರದಲ್ಲಿ ಭಟ್ಕಳ-ಕುಮಟಾ-ಹೊನ್ನಾವರ ಕ್ರಿಶ್ಚಿಯನ್ ಸಮುದಾಯದ ಮಟ್ಟದಲ್ಲಿ ಕೊಂಕಣಿ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಫ್ರೆಂಕಿ ಫರ್ನಾಂಡಿಸ್ ಗ್ರಾಮ ಪಂಚಾಯತ ಸದಸ್ಯರು ದಿವಗಿ ಉದ್ಘಾಟಿಸಿದರು. ವಂದನೀಯ ಫಾದರ್ ಜೊನ್ಸನ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಕ್ರಮ್ ನಾಯ್ಕ, ಪ್ರತಿಮಾ ರೊಡ್ರಿಗಿಸ್ ಆಗಮಿಸಿದ್ದರು.
ಮುಕ್ತಾಯ ಸಮಾರಂಭದಲ್ಲಿ ಫಾದರ್ ವಿಲ್ಸನ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಎಮ್.ಎನ್.ಸುಬ್ರಹ್ಮಣ್ಯ, ಸಿದ್ದರಾಮೇಶ್ವರ ಎಸ್. ಸಿ.ಪಿ.ಐ ಹೊನ್ನಾವರ, ಝೇವಿಯರ್ ಹೊರ್ಟಾ ಆಗಮಿಸಿದ್ದರು. ಸ್ಯಾಮ್ಸನ್ ಲೋಪಿಸ್, ಲೀನಾ ಕಾರ್ಲಿಸ್ ಡಿ’ಕುನ್ನಾ, ಫ್ಲಾವಿಯಾ ಗೊನ್ಸಾಲ್ವಿಸ್, ಶಮಾ ಡಿ’ಸೋಜಾ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಪ್ರತಿಮಾ ರೊಡ್ರಿಗಿಸ್ ವಾರ್ಷಿಕ ವರದಿ ಮಂಡಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಂತ್ ಫ್ರಾನ್ಸಿಸ್ ಆಸ್ಸಿಸ್ಸಿ ಚರ್ಚ್, ಹಡಿನಬಾಳ, ದ್ವಿತೀಯ ಸ್ಥಾನ ಸಂತ ಪೇತ್ರರ ದೇವಾಲಯ, ಸಾನಾಮೋಟಾ, ತೃತೀಯ ಸ್ಥಾನ ಮಿಲಾಗ್ರಿಸ್ ಚಾಪೆಲ್, ಕಳಸನಮೋಟಾ. ಉತ್ತಮ ನಟ ರವಿ ಲೋಪಿಸ್, ಹಡಿನಬಾಳ, ಉತ್ತಮ ನಟಿ ಶ್ರೀಮತಿ ಸುಶ್ಮಿತಾ ಪಿಂಟೊ, ಸಾನಾಮೋಟಾ, ಉತ್ತಮ ಖಳನಟ ಲೊರೆನ್ಸ್ ಫರ್ನಾಂಡಿಸ್, ಹಡಿನಬಾಳ, ಉತ್ತಮ ಖಳನಟಿ ಸಾರಾ ಹೊರ್ಟಾ, ಸಾನಾಮೋಟಾ, ಉತ್ತಮ ಹಾಸ್ಯನಟ ಸಂತೋಷ್ ಮಿರಾಂದಾ, ಹಡಿನಬಾಳ, ಉತ್ತಮ ಹಾಸ್ಯನಟಿ ರೀನಾ ಹೋರ್ಟಾ, ಸಾನಾಮೋಟೊ, ಉತ್ತಮ ಸಂಗೀತಗಾರ ನೀಲನ್ ಮಿರಾಂದಾ, ಮೋಟೊ, ಉತ್ತಮ ಕಥೆ ಜೊಯಲ್ ಹೊರ್ಟಾ, ಅಪ್ಪರ ಕಾಸರಕೋಡ, ಉತ್ತಮ ನಿರ್ದೇಶಕ ಝೇವಿಯರ್ ಹೊರ್ಟಾ, ಸಾನಾಮೋಟಾ ಇವರಿಗೆಲ್ಲರಿಗೂ ಪಾರಿತೋಷಕ ನೀಡಲಾಯಿತು.

ಪ್ರತಿಯೊಂದು ತಂಡದ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಈ ಸ್ಪರ್ಧೆಯಲ್ಲಿ 90 ಕಲಾವಿದರು ಭಾಗವಹಿಸಿದರು. ಕೊಂಕಣಿ ಭಾಷೆ ಹಾಗೂ ಸಂಸ್ಕೃತಿ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಇಂತ್ರು ಡಿಸೋಜಾ ಸಂಘಟಿಸಿದರು. ಕಾರ್ಯ ನಿರೂಪಣೆಯನ್ನು ಸ್ಟೀವನ್ ಲೋಪಿಸ್ ಹಾಗೂ ಕುಮಾರಿ ಮರಿಸ್ಸಾ ಗೊನ್ಸಾಲ್ವಿಸ್ ನಿರೂಪಿಸಿದ್ದರು.