ನಮ್ಮ ಮೆಟ್ರೋ ರೆಡ್ ಲೈನ್‌ಗಾಗಿ ಮತ್ತೆ ಡಿಪಿಆರ್ ಸಲ್ಲಿಕೆ; ಈ ಬಾರಿಯಾದರೂ ಕೇಂದ್ರದಿಂದ ಸಿಗುತ್ತದೆಯೇ ಗ್ರೀನ್ ಸಿಗ್ನಲ್?

ಬೆಂಗಳೂರು, ಅಕ್ಟೋಬರ್ 27: ಈ ಹಿಂದೆ ರಾಜ್ಯ ಸರ್ಕಾರ ಸರ್ಜಾಪುರದಿಂದ ಹೆಬ್ಬಾಳದವರೆಗೆ ರೆಡ್ ಲೈನ್ ಮೆಟ್ರೋ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಕೇಂದ್ರದ ಸಲಹೆಯಂತೆ ಯೋಜನಾ ವೆಚ್ಚವನ್ನು ಕಡಿಮೆ ಮಾಡಿದ ಬಳಿಕ ಇದೀಗ ಮತ್ತೊಮ್ಮೆ ಡಿಪಿಆರ್ ಕಳುಹಿಸಲಾಗಿದೆ. 37 ಕಿಮೀ ಉದ್ದದ ಈ ಹಂತ-3A ಯೋಜನೆಗೆ 28 ಸ್ಟೇಷನ್‌ಗಳು ಇರಲಿದ್ದು, ನಾಲ್ಕು ಇಂಟರ್‌ಚೇಂಜ್ ಮಾರ್ಗಗಳನ್ನು ಸಂಪರ್ಕಿಸಲಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಈ ಬಾರಿಯಾದರೂ ಗ್ರೀನ್ ಸಿಗ್ನಲ್ ಸಿಕ್ಕರೆ, ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಹಾಯಕವಾಗಲಿದೆ.