ಹೊನ್ನಾವರ: ತಾಲೂಕಿನಲ್ಲಿ ಗಾಳಿ-ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ, ಮರಗಳು ಮುರಿದುಬಿದ್ದ ಘಟನೆಗಳೂ ನಡೆದಿವೆ. ಕುಳಕೋಡು ಗ್ರಾಮದ ಸರಕಾರಿ ಐಟಿಐ ಕಾಲೇಜಿನ ಮೇಲ್ಟಾವಣಿಯು ಹಾನಿಯಾಗಿದೆ. ಕೆಕ್ಕಾರ ಹಾಗು ಕಾಸರಕೋಡಿನಲ್ಲಿ ಕೆಲವರ ಮನೆಗಳ ಮೇಲೆ ಅಡಕೆ ಮರ ಬಿದ್ದು ಹಾನಿ ಸಂಭವಿಸಿದೆ. ಕೆಳಗಿನೂರು ಗ್ರಾಮದಲ್ಲಿ ದೊಡ್ಡ ಗಾತ್ರದ ಮರಗಳು ಬಿದ್ದು 5 ವಾಸ್ತವ್ಯದ ಮನೆಗಳ ಮೇಲ್ಟಾವಣಿ ಹಾನಿಯಾಗಿದೆ.




