ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

ಲಕ್ನೋ: ಉತ್ತರ ಪ್ರದೇಶದಲ್ಲಿ ಈಗ ಮುಸ್ಲಿಮರೇ ಅಕ್ರಮವಾಗಿ ನಿರ್ಮಾಣಗೊಂಡ ಮಸೀದಿಯನ್ನು (Mosque) ಜೆಸಿಬಿಯಿಂದ ಕೆಡವಿದ್ದಾರೆ. ಸಂಭಾಲ್‌ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮರು ಗೌಸುಲ್ಬರಾ ಮಸೀದಿಯನ್ನು ನೆಲಸಮ ಮಾಡಿದ್ದಾರೆ.

ಅನಧಿಕೃತವಾಗಿ  ನಿರ್ಮಾಣಗೊಂಡಿದ್ದ ಮಸೀದಿಯನ್ನು ತೆಗೆಯುವಂತೆ ಜಿಲ್ಲಾಡಳಿತ 4 ದಿನಗಳ ಡೆಡ್‌ಲೈನ್‌ ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆ ಮುಸ್ಲಿಮರೇ ಮಸೀದಿಯನ್ನು ಕೆಡವಿದ್ದಾರೆ.