ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರ್ನಾಟಕ ಬಜೆಟ್ 2024 (Karnataka Budget) ಮಂಡನೆ ಮಾಡುತ್ತಿದ್ದು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ ಇಲಾಖೆ ಸೇರಿದಂತೆ ಇಲಾಖಾವಾರು ಹಂಚಿಕೆ ಮಾಡಿದ ಅನುದಾನಗಳ ವಿವರಗಳು ಇಲ್ಲಿವೆ.
- ಶಿಕ್ಷಣ ಇಲಾಖೆ: 44,422 ಕೋಟಿ ರೂಪಾಯಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 34,406 ಕೋಟಿ ರೂ.
- ಇಂಧನ ಇಲಾಖೆ: 23,159 ಕೋಟಿ ರೂಪಾಯಿ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: 21,160 ಕೋಟಿ ರೂಪಾಯಿ
- ಗೃಹ ಮತ್ತು ಸಾರಿಗೆ ಇಲಾಖೆ: 19,777 ಕೋಟಿ ರೂಪಾಯಿ
- ನೀರಾವರಿ ಇಲಾಖೆ: 19,179 ಕೋಟಿ ರೂಪಾಯಿ
- ನಗರಾಭಿವೃದ್ಧಿ ಇಲಾಖೆ: 18,155 ಕೋಟಿ ರೂಪಾಯಿ
- ಕಂದಾಯ ಇಲಾಖೆ: 16,170 ಕೋಟಿ ರೂಪಾಯಿ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 15,145 ಕೋಟಿ ರೂ.
- ಸಮಾಜ ಕಲ್ಯಾಣ ಇಲಾಖೆ: 13,334 ಕೋಟಿ ರೂಪಾಯಿ
- ಲೋಕೋಪಯೋಗಿ ಇಲಾಖೆ: 10,424 ಕೋಟಿ ರೂಪಾಯಿ
- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: 9,963 ಕೋಟಿ ರೂ.
- ಕೃಷಿ ಮತ್ತು ತೋಟಗಾರಿಕೆ ಇಲಾಖೆ: 6,688 ಕೋಟಿ ರೂ.
- ಮೀನುಗಾರಿಕೆ ಮತ್ತು ಪಶುಸಂಗೋಪನೆ: 3,307 ಕೋಟಿ ರೂ.
- ಇತರ ಇಲಾಖೆಗಳಿಗೆ 1,24,593 ಕೋಟಿ ರೂಪಾಯಿ ಅನುದಾನ