ತುಮಕೂರು, ಡಿಸೆಂಬರ್ 15: ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚ ತಾಂಡವಾಡುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ಬಡರೋಗಿಯಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು ಪ್ರತ್ಯೆಕ ಎರಡು ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಲಂಚ ಸ್ವೀಕರಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರೋಗ್ಯ ಸೌದದ ಮುಖ್ಯ ಜಾಗೃತ ಕೋಶದ ಅಧಿಕಾರಿಗಳು ವೈದ್ಯರಿಗೆ ಮತ್ತು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಹಣ ವಾಪಸ್ ನೀಡಿದ್ದಾರೆ.
ಗರ್ಭಿಣಿಯಿಂದ ನರ್ಸ್ ಲಂಚ ವಾಪಸ್
ಕೊರಟಗೆರೆ ತಾಲೂಕಿನ ಅನುಸೂಯ ಎಂಬವರು ಹೆರಿಗೆಗೆ ಆಸ್ಪತ್ರೆಗೆ ಬಂದಿದ್ದರು. ಗರ್ಭಿಣಿ ಕಡೆಯಿಂದ ನರ್ಸ್ ಐದು ಸಾವಿರ ರೂ. ಲಂಪಡೆದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಜಾಗೃತ ಅಧಿಕಾರಿಗಳು ಅನಸೂಯ ಅವರನ್ನು ಪೋನ್ ಮೂಲಕ ಸಂಪರ್ಕ ಮಾಡಿದ್ದರು. ನರ್ಸ್ಗೆ ಐದು ಸಾವಿರ ನೀಡಿರುವುದಾಗಿ ಅನುಸೂಯ ಅಧಿಕಾರಿಗಳಿಗೆ ತಿಳಿಸಿದರು. ಕೂಡಲೆ ಅಧಿಕಾರಿಗಳು ನರ್ಸ್ ಅನ್ನು ತರಾಟೆಗೆ ತೆಗೆದುಕೊಂಡು, ಗರ್ಭಿಣಿಗೆ ಹಣ ವಾಪಸ್ ನೀಡುವಂತೆ ಮಾಡಿದರು.
1500 ರೂ. ಲಂಚ ಪಡೆದಿದ್ದ ವೈದ್ಯ
ಮತ್ತೊಂದು ಪ್ರಕರಣದಲ್ಲಿ ಕಣ್ಣಿನ ವೈಧ್ಯ ಡಾ. ಗಂಗಾಧರ ಓರ್ವ ವಿದ್ಯಾರ್ಥಿನಿಯಿಂದ 1500 ರೂ. ಲಂಚ ಪಡೆದಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಜಾಗೃದ ಅಧಿಕಾರಿಗಳಿಗೆ ದೂರು ನೀಡಿದ್ದಳು. ಕೂಡಲೆ ಅಧಿಕಾರಿಗಳು ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಹಣ ವಾವಸ್ ನೀಡುವಂತೆ ಸೂಚಿಸಿದರು. ಇನ್ನು ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.