ಬೆಂಗಳೂರಿನಲ್ಲಿ ಜಾತಿಗಣತಿ ನಡೆಸಲು ತಾಂತ್ರಿಕ ಅಡೆತಡೆ

ಬೆಂಗಳೂರು: ರಾಜಧಾನಿಯಲ್ಲಿ ಜಾತಿಗಣತಿ ಕಾರ್ಯಕ್ಕೆ ತಾಂತ್ರಿಕ ಅಡೆತಡೆ ಎದುರಾಗಿದೆ. ಗಣತಿಗೆ ಮೊದಲು ಬೆಸ್ಕಾಂ ಸಿಬ್ಬಂದಿ ಮನೆ ಮನೆಗೆ ತೆರಳಿ ಯುಎಚ್‌ಐಡಿ ಸಂಖ್ಯೆಯನ್ನು ಅಂಟಿಸಿದ್ದರು. ಆದರೆ, ಆ ಸಂಖ್ಯೆಯನ್ನು ಸೈಟ್‌ನಲ್ಲಿ ನಮೂದಿಸಿದರೂ ಪೋರ್ಟಲ್ ತೆರೆಯುತ್ತಿಲ್ಲ. ಇದರ ಪರಿಣಾಮವಾಗಿ ಗಣತಿದಾರರು ತಾವೇ ಮನೆ ಸಂಖ್ಯೆಯನ್ನು ಸೃಷ್ಟಿಸಿ ಸಮೀಕ್ಷೆ ನಡೆಸುವ ಪರಿಸ್ಥಿತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಗಣತಿದಾರರಿಗೆ ಮನೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಕುರಿತು ವಿಶೇಷ ತರಬೇತಿ ನೀಡಲು ಮುಂದಾಗಿದ್ದಾರೆ. ಮುಖ್ಯವಾಗಿ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಹೆಚ್ಚಾಗಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮರು ತರಬೇತಿ ನೀಡಲಾಗುತ್ತಿದೆ.