ಹೊನ್ನಾವರ: ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ವಿಶ್ವ ಕರಾಟೆ ಮತ್ತು ಕಿಕ್ ಬಾಕ್ಸಿಂಗ್ ಯುನಿಯನ್ ತಫಿಸಾ ಅನಮೋದಿತ ಅಂತರರಾಷ್ಟ್ರೀಯ ಒಲಂಪಿಕ್ ಸಮತಿ, ಹಂದೇಸ್ ಕರಾಟೆ ಸ್ಪೋರ್ಟ್ಸ್ ಸೆಂಟರ (ರಿ)ಸಂಘಟಿತ, ಉತ್ತರ ಕನ್ನಡ ಕರಾಟೆ ಶಿಕ್ಷಕರ ಕ್ರೀಡಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಹೊನ್ನಾವರದ ಕರಾಟೆ ತಂಡದ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಗೈದಿದ್ದಾರೆ..

ಪ್ರಣವ ಮೋಹನ ನಾಯ್ಕ ಹೊನ್ನಾವರ ಕಟ ದ್ವೀತಿಯ ಕುಮಿಟೆ ದ್ವೀತಿಯ, 6-8 ವರ್ಷದ ವಿಭಾಗದ ಸಾಧನೆ ಗೈದ ವಿದ್ಯಾರ್ಥಿ ಪ್ರಭಾಕರ ಗೌಡ ಅವರಿಂದ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ತರಬೇತಿ ಪಡೆಯುತ್ತಿದ್ದರು. ವಿದ್ಯಾರ್ಥಿಯ ಈ ಸಾಧನೆಗೆ ತರಬೇತುದಾರರು, ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ….




