ಸಾವಿನ ಸಂಖ್ಯೆ 31ಕ್ಕೆ ಏರಿಕೆ; ಉಳಿದ 7 ಕೃಷ್ಣಮೃಗಗಳ ರಕ್ಷಣೆಗೆ ಹೋರಾಟ

ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯದಲ್ಲಿ ಬ್ಯಾಕ್ಟೀರಿಯಾ ಸೋಂಕಿನಿಂದ ಮೃತಪಟ್ಟ ಕೃಷ್ಣಮೃಗಗಳ ಸಂಖ್ಯೆ 31ಕ್ಕೆ ಏರಿಕೆ ಕಂಡಿದ್ದು, ಉಳಿದ 7 ಕೃಷ್ಣಮೃಗಗಳನ್ನು ಉಳಿಸಲು ವೈದ್ಯರು ಮತ್ತು ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಸರಣಿ ಸಾವುಗಳು ದಾಖಲಾಗುತ್ತಿದ್ದಂತೆಯೇ, ಮೃಗಾಲಯದ ಪಶುವೈದ್ಯರು ಉಳಿದಿರುವ ಮೃಗಗಳಿಗೆ ತಕ್ಷಣವೇ ಆಂಟಿಬಯೋಟಿಕ್ ಚಿಕಿತ್ಸೆ ಆರಂಭಿಸಿದ್ದಾರೆ. ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಕಾರಣವಾಗಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ, ಮೃಗಾಲಯದ ಒಳವಲಯದಲ್ಲಿ ವ್ಯಾಪಕವಾಗಿ ಔಷಧಿ ಸಿಂಪಡಣೆ ಮಾಡಿ ಬ್ಯಾಕ್ಟೀರಿಯಾ ನಾಶಗೊಳಿಸುವ ಪ್ರಯತ್ನ ಜೋರಾಗಿದೆ.

ಗಳಲೆ ರೋಗವು ಇತರ ಸಾಕುಪ್ರಾಣಿಗಳಿಗೆ ಹರಡುವ ಸಾಧ್ಯತೆ ಇರುವುದರಿಂದ, ಮೃಗಾಲಯದ ಸುತ್ತಮುತ್ತಲಿನ ಗ್ರಾಮಗಳಿಗೆ ಎಚ್ಚರಿಕೆ ಸಂದೇಶಗಳು ಕಳುಹಿಸಲಾಗಿದೆ. ಅಧಿಕಾರಿಗಳು ಸೋಂಕಿನ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದಾರೆ.