ಬಿಗ್‌ಬಾಸ್ ಮನೆಯಿಂದ ಈ ಬಾರಿ ಸ್ಪರ್ಧಿ ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಫಿನಾಲೆ ವೀಕ್ ವರೆಗೂ ಉಳಿಯಬಹುದಾದ ಸ್ಪರ್ಧಿ ಎಂಬ ನಿರೀಕ್ಷೆ ಮೂಡಿಸಿದ್ದರೂ, ಅಚ್ಚರಿಯ ರೀತಿಯಲ್ಲಿ ಸುಧಿ ಮನೆಗೆ ಹೊರಟಿದ್ದಾರೆ.
ಈ ನಡುವೆ, ಬಿಗ್‌ಬಾಸ್ ಮನೆಯಲ್ಲಿ ಪ್ರತಿಸ್ಪರ್ಧಿ ರಕ್ಷಿತಾಗೆ ಕೆಟ್ಟ ಪದ ಬಳಸಿದ್ದ ವಿಚಾರಕ್ಕೆ ಕ್ಷಮೆ ಕೇಳಿದ್ದಾರೆ. ಮನೆಯಲ್ಲಿ ರಕ್ಷಿತಾ ವಿರುದ್ಧ ಸುಧಿ ಮತ್ತು ಅಶ್ವಿನಿ ಆರಂಭದಿಂದಲೇ ವಿರೋಧಿ ನಿಲುವು ತಾಳಿದ್ದರು. ಜಗಳ ಉಚ್ಛಸ್ಥಿತಿಗೇರಿದ ವೇಳೆ ರಕ್ಷಿತಾ ಕುರಿತು ಹಗುರವಾಗಿ ಮಾತನಾಡಿದ್ದಕ್ಕಾಗಿ ಈಗ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ರಕ್ಷಿತಾರನ್ನು ಕೆಟ್ಟ ಪದ ಬಳಸಿ ನಿಂದಿಸಿದ್ದಕ್ಕಾಗಿ, ರಕ್ಷಿತಾ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಕೈಮುಗಿದು ಕ್ಷಮೆಯಾಚಿಸಿರುವ ಸುಧಿ, ಬಿಗ್‌ಬಾಸ್ ಮನೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ ಎಲ್ಲರ ಆಕ್ರೋಶಕ್ಕೂ ಕಾರಣವಾಗಿದ್ದರು. ಆ ಪದದ ಅರ್ಥ ‘ಸಿಲ್ಲಿ’ ಎಂದು ಹೇಳಿ ವಿವಾದ ಹೆಚ್ಚಿಸಿದ್ದರೂ, ನಂತರ ಕಿಚ್ಚ ಸುದೀಪ್ ಅವರ ಎದುರು ಕ್ಷಮೆಯನ್ನೂ ಕೇಳಿದ್ದರು.
ಮನೆಯಿಂದ ಹೊರಬಂದ ಬಳಿಕ ರಕ್ಷಿತಾ ಸಾಧನೆಗಳ ಬಗ್ಗೆ ತಿಳಿದು “ನನ್ನ ಪತ್ನಿ ಹೇಳಿದರು, ರಕ್ಷಿತಾ ಹಲವಾರು ಮೆಡಲ್‌ಗಳನ್ನು ಗೆದ್ದಿದ್ದಾರೆ ಎಂದು. ಏನೇ ಆಗಿದ್ದರೂ, ನಾನು ಆ ಪದ ಬಳಸಬಾರದಾಗಿತ್ತು, ತಪ್ಪಾಯಿತು” ಎಂದು ಸುಧಿ ಹೇಳಿದ್ದಾರೆ.

