ಹೊನ್ನಾವರ ನ. ೧೦: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ತತ್ವ ಜ್ಞಾನಿಗಳ ದಿನಾಚರಣೆ ಪ್ರಯುಕ್ತ ಆಚಾರ್ಯತ್ರಯರ ಜಯಂತ್ಯೋತ್ಸವದಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸಹಕಾರ ರತ್ನ ಪುರಸ್ಕೃತ ಹೊನ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ವಿಷ್ಣು ಬಾಳೇರಿ ಇವರನ್ನು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಯಿತು.

ರಾಘವ ಬಾಳೇರಿ ಸಹಕಾರಿ ಕ್ಷೇತ್ರದ ಹೊರತಾಗಿ ಗೌಡ ಸಾರಸ್ವತ ಬ್ರಾಹ್ಮಣ ಯುವ ಸಂಘಟನೆಯಲ್ಲಿ ಪ್ರಮುಖರಾಗಿದ್ದು ಪ್ರಥಮವಾಗಿ ಜಿಎಸ್‌ಬಿ ಯುವವಾಹಿನಿಯನ್ನು ಮೊದಲು ಹೊನ್ನಾವರ ತಾಲೂಕಿನಲ್ಲಿ ಸಂಘಟಿಸಿ ಈಗ ಜಿಲ್ಲಾಮಟ್ಟದಲ್ಲಿ ಸಂಘಟನೆ ಬೆಳೆದಿದೆ. ಇತರ ಸಮಾಜದವರು ಇದೇ ಮಾದರಿಯಲ್ಲಿ ಯುವ ಸಂಘಟನೆಗಳನ್ನು ರಚಿಸಿಕೊಂಡಿದ್ದಾರೆ. ಆಧುನಿಕತೆಯೊಂದಿಗೆ ಸಮಾಜಮುಖಿಯಾಗಿ ಅರ್ಬನ್ ಬ್ಯಾಂಕ್‌ನ್ನು ನಡೆಸಿದ್ದಾರೆ.
ಆರೋಗ್ಯ ಸಚಿವ ದಿನೇಶ ಗುಂಡುರಾವ್ ಮುಖ್ಯ ಅತಿಥಿಗಳಾಗಿದ್ದರು. ಪ್ರಬಲ ಜಾತಿಗಳು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ರಾಜಕೀಯ ಅಧಿಕಾರ, ಸರ್ಕಾರದ ಹೆಚ್ಚಿನ ಸೌಲಭ್ಯ ಸಿಗುತ್ತಿದ್ದು ಬ್ರಾಹ್ಮಣರ ಒಗ್ಗಟ್ಟಿನಿಂದ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.



