ಕಾರವಾರ: ಜಿಲ್ಲೆಯಲ್ಲಿ ಸೀಮೆಎಣ್ಣೆ ಬಳಸಿ ಔಟ್‌ಬೋರ್ಡ್, ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಆ. 26 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಜಿಲ್ಲೆಯಾದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕಾರ್ಯ ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಸೀಮೆಎಣ್ಣೆ ಬಳಸಿ ಔಟ್‌ಬೋರ್ಡ್ ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ದೋಣಿಯ ಮಾಲೀಕರು ತಪಾಸಣೆಗೆ ನಿಗದಿ ಪಡಿಸಿದ ದಿನಾಂಕದಂದು ತಮ್ಮ ಮೋಟಾರಿಕೃತ ಮೀನುಗಾರಿಕೆ ದೋಣಿಯನ್ನು ಕಾರವಾರ ತಾಲೂಕಿನ ಮೀನುಗಾರಿಕೆ ಉಪನಿರ್ದೇಶಕರ ಕಛೇರಿ ಎದುರುಗಡೆ, ಮಾಜಾಳಿ ಬೀಚ್ ದೇವಭಾಗ, ಮುದಗಾ ಬೀಚ್, ಅಂಕೋಲಾ ತಾಲೂಕಿನ ಹಾರವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್, ಕುಮಟಾ ತಾಲೂಕಿನ ವನ್ನಳ್ಳಿ ಬೀಚ್, ಕದಡಿ ಬಂದರು, ಅಳ್ವೆದಂಡೆ, ಶಶಿಹಿತ್ತಲು, ಹೊನ್ನಾವರ ತಾಲೂಕಿನ ಟೊಂಕಾ ಕಾಸರಕೋಡ ಬಂದರು, ಮಂಕಿ ಕೋಡಿ ಬೀಚ್, ಹಾಗೂ ಭಟ್ಕಳ್ ತಾಲೂಕಿನ ಮುಂಡಳ್ಳಿ ಬೆಲೆ ಬೀಚ್, ಮುರ್ಡೇಶ್ವರ ಬೀಚ್, ತೆಂಗಿನಗುಂಡಿ ಬಂದರು ಪ್ರದೇಶಗಳ ತಪಾಸಣಾ ಕೇಂದ್ರದಲ್ಲಿ ತಪ್ಪದೇ ದೋಣಿ ನೊಂದಣಿ ಪತ್ರ, ಹಾಲಿ ಇರುವ ಸೀಮೆ ಎಣ್ಣೆ ಪರ್ಮಿಟ್, ಆಧಾರ ಕಾರ್ಡ ಝರಾಕ್ಸ್ ಪ್ರತಿ ದಾಖಲೆಗಳೊಂದಿಗೆ ಹಾಜರುಪಡಿಸಿ, ತಮ್ಮ ಮೀನುಗಾರಿಕೆ ದೋಣಿ ಮತ್ತು ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂಬುದನ್ನು ತಪಾಸಣಾ ತಂಡಕ್ಕೆ ಖಾತ್ರಿಪಡಿಸಬೇಕು.
ತಪಾಸಣೆಗೆ ಒಳಪಡಿಸದ ಮತ್ತು ಸುಸ್ಥಿತಿಯಲ್ಲಿಲ್ಲದ ದೋಣಿಗಳ ನೊಂದಣಿಯನ್ನು ಹಾಗೂ ಸೀಮೆ ಎಣ್ಣೆ ಅನುಮತಿಯನ್ನು ರದ್ದುಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕೆ ಕಛೇರಿಯನ್ನು ಕೆಲಸದ ಅವಧಿಯೊಳಗೆ ಸಂರ್ಪಕಿಸಿ ಎಂದು ಕಾರವಾರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.