ಮೊಬೈಲ್ ಅಂಗಡಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಕಂಬಿಹಿಂದೆ ತಳ್ಳಿದ ಪೊಲೀಸರು.!

ಅಂಕೋಲಾ: ಅವರ್ಸಾದಲ್ಲಿ ಮೊಬೈಲ್ ಅಂಗಡಿ ಕಳ್ಳತನ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿದ್ಧಾರ್ಥ ನಾಯ್ಕ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿ. ಕಳ್ಳತನ ಮಾಡಿದ ಸಿದ್ಧಾರ್ಥನಿಂದ ದುಬಾರಿ ದರದ ಎರಡು ಮೊಬೈಲ್ ಮತ್ತು ಒಂದು ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿನ್ನೆ ರಾತ್ರೆ ಸಂಜೀವ್ ನಾಯ್ಕ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿ ಕಳ್ಳತನವಾಗಿತ್ತು. ಅಂಗಡಿಯ ಮೇಲ್ಚಾವಣಿಯ ಹಂಚು ತೆಗೆದು ಅಂಗಡಿ ಒಳಗೆ ನುಗ್ಗಿದ ದೃಶ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿತ್ತು.