ಹೊನ್ನಾವರ: ಜಿಲ್ಲೆಯಿಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಸ್ವಾತಂತ್ರ್ಯ ಸೇನಾನಿಗಳಾಗಿದ್ದ ತಾಲೂಕಿನ ಇಡಗುಂಜಿ ಗ್ರಾಮದ ದಿ. ತಿಮ್ಮಪ್ಪ ನಾರಾಯಣ ಯಾಜಿ ಅವರ ಪತ್ನಿ ಲಕ್ಷ್ಮೀ ಯಾಜಿಯವರನ್ನು 75 ರ ಸ್ವಾತಂತ್ರ್ಯ ಸಂಭ್ರಮೋತ್ಸವದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದಿಂದ ಸನ್ಮಾನಿಸಿದರು.
ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ, ಡಾ. ಎಸ್. ಡಿ. ಹೆಗಡೆ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ, ತಾಲೂಕ ಘಟಕದ ಅಧ್ಯಕ್ಷರಾದ ಎಸ್. ಎಚ್. ಗೌಡ, ಕಾರ್ಯದರ್ಶಿ ಗಜಾನನ ನಾಯ್ಕ ಹಾಗೂ ಯಾಜಿ ಕುಟುಂಬದ ಹಿರಿಯ ಸದಸ್ಯ ಪ್ರಭಾಕರ ಯಾಜಿ, ಸಂಜಯ ಯಾಜಿ ಮುಂತಾದವರು ಉಪಸ್ಥಿತರಿದ್ದರು.