ಐಕ್ಯತೆ ಸಾಧಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಸನ್ನದ್ಧರಾಗೋಣ – ತಹಶೀಲ್ದಾರ ನಾಗರಾಜ ನಾಯ್ಕಡ್ ಕರೆ

ಹೊನ್ನಾವರ: ನಾವೆಲ್ಲ ಭಾರತೀಯರು ಎಂಬ ಐಕ್ಯತೆ ಸಾಧಿಸಿ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ರಾಷ್ಟ್ರ ರಕ್ಷಣೆಗೆ ಹೋರಾಡಲು ಸನ್ನದ್ದರಾಗೋಣ ಎಂದು ತಹಶೀಲ್ದಾರ ನಾಗರಾಜ ನಾಯ್ಕಡ್ ಕರೆ ನೀಡಿದರು. ತಾಲೂಕ ಆಡಳಿತದ ವತಿಯಿಂದ ಪಟ್ಟಣದ ಮಿನಿ ವಿಧಾನಸೌದದಲ್ಲಿ ನಡೆದ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

ಪಾರತಂತ್ರ್ಯದ ಬಂಧನದಿಂದ ಮುಕ್ತವಾದ ಈ ದಿನವನ್ನು ಅಮೃತಮಹೊತ್ಸವದ ಸಂಭ್ರಮವಾಗಿ ಪ್ರತಿ ಮನೆ ಹಾಗೂ ಕಛೇರಿಯ ಮೇಲೆ ರಾಷ್ಟಧ್ವಜಾರೋಹಣ ನೆರವೇರಿಸಿ ಪ್ರತಿ ಹೆಜ್ಜೆಯಲ್ಲೂ ರಾಷ್ಟ್ರಪ್ರೇಮವನ್ನು ಹೆಚ್ಚಿಸಿದ್ದೇವೆ. ದೇಶ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸಬೇಕಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರನ್ನು ನಾವು ಮುಖ್ಯವಾಹಿನಿಗೆ ತರಬೇಕಿದೆ. ಪ್ರತಿಯೊಬ್ಬರೂ ರಾಷ್ಟ್ರಾಭಿಮಾನದ ಮೂಲಕ ದೇಶ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ರಾಷ್ಟ್ರದ ಐಕ್ಯತೆಗೆ ಮುಂದಾಗೋಣ ಎಂದು ಶುಭ ಹಾರೈಸಿದರು.

ಈ ವೇಳೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್, ತಾ.ಪಂ. ಆಡಳಿತಾಧಿಕಾರಿ ವಿನೋದ್ ಅಣ್ವೇಕರ್, ಇ.ಓ. ಸುರೇಶ ನಾಯ್ಕ, ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ್, ಸಿ.ಪಿ.ಐ. ಶ್ರೀಧರ ಎಸ್.ಆರ್, ಪಿ.ಎಸೈಗಳಾದ ಮಹಾಂತೇಶ ನಾಯಕ್, ಶಶಿಕುಮಾರ, ಆನಂದಮೂರ್ತಿ, ತಾಲೂಕ ಆರೊಗ್ಯ ಇಲಾಖೆಯ ಆಡಳಿತಾಧಿಕಾರಿ ಉಷಾ ಹಾಸ್ಯಗಾರ, ಸಹಾಯಕ ಕೃಷಿ ನಿರ್ದೆಶಕಿ ಪುನೀತಾ ಎಸ್.ಬಿ., ಪ.ಪಂ.ಸದಸ್ಯರು, ವಿವಿಧ ಪಕ್ಷದ ಪ್ರಮುಖರು, ಸಂಘಟನೆಯ ಪ್ರಮುಖರು ಹಾಗೂ ಇನ್ನಿತರು ಉಪಸ್ಥಿತರಿದ್ದರು.