ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಸನ್ನಡತೆ ಆಧಾರದ ಮೇಲೆ ಜಿಲ್ಲಾ ಕೇಂದ್ರ ಕಾರಾಗೃಹದಿಂದ 10 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಕಾರಾಗೃಹದ ಅಧೀಕ್ಷಕ ಐ ಜೆ ಮ್ಯಾಗೇರಿ ನೇತೃತ್ವದಲ್ಲಿ ಕೈದಿಗಳ ಬಿಡುಗಡೆ ಮಾಡಲಾಗಿದೆ. ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೀಡಾಗಿದ್ದ ಹತ್ತು ಜನ ಕೈದಿಗಳು
ಸನ್ನಡತೆಯಡಿ ಬಿಡುಗಡೆ ಮಾಡಿ ಕಾರಾಗೃಹದ ಸಿಬ್ಬಂದಿ ಪ್ರಮಾಣ ಪತ್ರ ನೀಡಿ ಸನ್ಮಾನ ಮಾಡಿದ್ದಾರೆ. ಇನ್ನು ಬಿಡುಗಡೆಗೊಂಡ ಕೈದಿಗಳನ್ನು ಕುಟುಂಬಸ್ಥರು ಬರ ಮಾಡಿಕೊಂಡಿದ್ದಾರೆ. ಕೈದಿಗಳ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.