ಕಾರು-ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಕಾರವಾರ: ಬೈಕ್ ಹಿಂಭಾಗದಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬಿಣಗಾ ಬಳಿ ನಡೆದಿದೆ. ಇಜಾಕ್ ಫರ್ನಾಂಡಿಸ್ ಮೃತ ಬೈಕ್ ಸವಾರ. ಬಿಣಗಾ ಕಡೆಯಿಂದ ಚೆಂಡಿಯಾಕಡೆ ಪ್ರಯಾಣಿಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ.