ಶೂ ಧರಿಸಿಯೇ ಧ್ವಜದ ಕಟ್ಟೆ ಏರಿ ಧ್ವಜಾರೋಹಣ

ಮುಂಡಗೋಡ: ಗುಂಜಾವತಿ ಉಪವಲಯ ಅರಣ್ಯಾಧಿಕಾರಿ ಶೂ ಧರಿಸಿ ಧ್ವಜದ ಕಟ್ಟೆ ಮೇಲೆ ನಿಂತಿರುವುದು ವಿವಾದಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಗುಂಜಾವತಿ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ ಶ್ರೀಶೈಲ ಐನಾಪೂರ ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶೂ ಧರಿಸಿಯೇ ಧ್ವಜದ ಕಟ್ಟೆ ಏರಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.

ನಾಲ್ಕು ಜನರಿಗೆ ಮಾದರಿಯಾಗಬೇಕಿದ್ದ ಅಧಿಕಾರಿಯ ಯಡವಟ್ಟಿನಿಂದ ರಾಷ್ಟ್ರಭಕ್ತರಲ್ಲಿ ಅಸಮಾಧಾನ ತೀವ್ರಗೊಂಡಿದೆ. ಸಾಕಷ್ಟು ರಾಜಕೀಯ ಬೆಂಬಲ ಹೊಂದಿರುವ ಅಧಿಕಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶ್ರೀಶೈಲ್ ಐನಾಪುರ ಮೇಲೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಏನಾದರೂ ವಿವರಣೆ ಅಥವಾ ಕ್ರಮ ಕೈಗೊಳ್ಳಬಹುದೇ? ಅಥವಾ ಪ್ರಭಾವಿ ಅಧಿಕಾರಿಯ ಉಸಾಬರಿ ನಮಗ್ಯಾಕೆ ಎಂದು ಸುಮ್ಮನಿರುತ್ತಾರೆಯೇ? ಕಾದು ನೋಡಬೇಕಿದೆ.