ವಕ್ಫ್ ಬೋರ್ಡ್ ನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ – ಶಿವರಾಮ ಹೆಬ್ಬಾರ್

ಶಿರಸಿ: ವಕ್ಫ್ ಬೋರ್ಡ್ನನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ. ಬೋರ್ಡ್ ಗೆ ಆಯ್ಕೆ ಮಾಡುವಾಗ ಎಲ್ಲರ ಪಟ್ಟಿ ಪಡೆದು ಆಯ್ಕೆ ಮಾಡಲಾಗುತ್ತದೆ. ಅಪರಾಧ ಹಿನ್ನೆಲೆ ಇರುವವರು ಎಂದು ಗಮನಕ್ಕೆ ಬಂದ ಬಳಿಕ ಸರಿಪಡಿಸಿಕೊಂಡಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಕೆಲ ಲೋಪ ದೋಷ ಆಗಿವೆ. ಮುಂಡಗೋಡಿನಲ್ಲಿ ಕಾಂಗ್ರೆಸ್ ನ ನಗರಸಭೆ ಸದಸ್ಯನನ್ನೇ ವಕ್ಪ್ ಬೋರ್ಡ್ ಗೆ ಸೇರಿಸಿಕೊಳ್ಳಲಾಗಿತ್ತು. ಬಳಿಕ ಸರಿಪಡಿಸಿಕೊಂಡಿದ್ದೇವೆ. ಅಲ್ಲದೇ ಜಿಲ್ಲೆಯ ಬೆಳೆ ಹಾನಿ ಮಾಹಿತಿಯನ್ನು ವೆಬ್ ಪೋರ್ಟಲ್ ಗೆ ದಾಖಲಿಸಲು ಸಮಸ್ಯೆ ಉಂಟಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಮಲೆನಾಡಿನಲ್ಲಿ ವಿದ್ಯುತ್‌ ಸಮಸ್ಯೆ, ಇಂಟರ್ನೆಟ್ ಸಮಸ್ಯೆ ಉಂಟಾಗಿದೆ. ಆದರೆ ರೈತರಿಗೆ ಪರಿಹಾರ ನೀಡಲು ಮೊದಲ ಆದ್ಯತೆ ನೀಡಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ಆಯಾ ಜಿಲ್ಲೆಯವರಿಗೇ ಉಸ್ತುವಾರಿ ನೀಡುವಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಅವರು ಪಕ್ಷದೊಂದಿಗೆ ಚರ್ಚೆ ನಡೆಸಿ ನಿರ್ಧರ ತೆಗೆದುಕೊಳ್ಳುತ್ತಾರೆ ಎಂದರು.