ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ವಿದ್ಯಾರ್ಥಿಗಳು ತಮ್ಮ ಗ್ರಾಮಕ್ಕೆ ಬಸ್ ಬಿಡುವಂತೆ ಆಗ್ರಹಿಸಿ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ. ಕೆಲಕಾಲ ಬಸ್ ನಿಲ್ಲಾಣದಿಂದ ಬಸ್ ಗಳು ಹೊರ ಹೋಗದಂತೆ ತಡೆದು, ಸ್ಥಳಕ್ಕೆ ನಿಗಮದ ಅಧ್ಯಕ್ಷ ವಿ.ಎಸ್ ಪಾಟೀಲ ಬರುವಂತೆ ಪಟ್ಟು ಹಿಡಿದಿದರು.
ಬಸ್ಸಿನ ಸಮಸ್ಯೆ ಹೇಳಿದರೆ ವಾಕರಸಾ ಅಧ್ಯಕ್ಷರು ನಿರ್ಲಕ್ಷಿಸುತ್ತಾರೆ. ಜು 27 ರಂದು ನಂದಿಕಟ್ಟಾ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಿ ಬಸ್ ಬಿಡದಿದ್ದರೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಪಟ್ಟಣದ ಶಿವಾಜಿ ಸಕ೯ಲ್ ಹತ್ತಿರ ರಸ್ತೆ ತಡೆದು ಆಕ್ರೋಶ ಪ್ರತಿಭಟಿಸಿದ್ದಾರೆ.
ನಂತರ ಮುಂಡಗೋಡ ಬಸ್ ನಿಲ್ಲಾಣದ ಹತ್ತಿರ ಪ್ರತಿಭಟನಾಕರರು ತೆರಳಿ ನಿಗಮದ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿ, ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು.
ಯಲ್ಲಾಪುರ ಡಿಪೋ ವ್ಯವಸ್ಥಾಪಕ ಸಂತೋಷ ವೆರ್ಣೇಕರ್ ಮತ್ತು ನಿಗಮದ ಅಧ್ಯಕ್ಷರಿಗೆ ಪೋನ್ ಮಾಡಿ ತಕ್ಷಣ ಬರುವಂತೆ ಪಟ್ಟು ಹಿಡಿದರು.
ವ್ಯವಸ್ಥಾಪಕರು ಪ್ರತಿಭಟನಾಕರನ್ನು ಸಮಾಧಾನಪಡಿಸಲು ಮುಂದಾದಾಗ ಕೈ ಬರಹದಲ್ಲಿ ಭರವಸೆ ನೀಡಿ ಎಂದು ಒತ್ತಾಯಿಸಿದರು. ಕೈ ಬರಹದಲ್ಲಿ ಬರೆದುಕೊಟ್ಟ ನಂತರ ಪ್ರತಿಭಟನೆಯನ್ನು ಹಿಂಪಡೆದರು.