ಜಪಾನ್ನಲ್ಲಿರುವ ಈ ದ್ವೀಪ 50 ವರ್ಷಗಳಿಂದ ಖಾಲಿ ಇದೆ. ಯಾರೂ ಕೂಡ ಇಲ್ಲಿ ಉಳಿದುಕೊಳ್ಳಲು ಮನಸ್ಸು ಮಾಡುವುದಿಲ್ಲ. 2019ರಿಂದ ಬೆರಳೆಣಿಕೆಯಷ್ಟು ಪ್ರವಾಸಿಗರು ಈ ಹಾಶಿಮಾ ದ್ವೀಪಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಜಗತ್ತಿನಿಂದ ಪ್ರತಿಯೊಬ್ಬರು ಕಣ್ಮರೆಯಾದರೆ ಹೇಗಿರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ. ಜಪಾನ್(Japan) ಕರಾವಳಿಯಲ್ಲಿರುವ ಈ ದ್ವೀಪ(Island) ಉತ್ತಮ ಉದಾಹರಣೆ ಎನ್ನಬಹುದು. ಒಂದು ಕಾಲದಲ್ಲಿ ಸಾವಿರಾರು ಜನರಿಂದ ತುಂಬಿದ್ದ ಈ ದ್ವೀಪ ಕಳೆದ 50 ವರ್ಷಗಳಿಂದ ಖಾಲಿ ಇದೆ. ಇದರ ಹೆಸರು ಹಾಶಿಮಾ(Hashima) ದ್ವೀಪ ಇದು ಜಪಾನ್ನ ಕರಾವಳಿಯಲ್ಲಿದೆ. 50 ವರ್ಷಗಳಿಂದ ಕೇವಲ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ವಿನಃ ಅಲ್ಲಿ ಯಾರೂ ವಾಸವಿಲ್ಲ.
ಇದರ ಮತ್ತೊಂದು ಹೆಸರು ಗುಂಕಂಜಿಮಾ, ಇದರರ್ಥ ಯುದ್ಧನೌಕೆ ದ್ವೀಪ ಎಂದು. ದ್ವೀಪವು ಮೂಲತಃ ಕಲ್ಲಿದ್ದಲು ಗಣಿಗಾರಿಕೆಯ ಸ್ಥಳವಾಗಿ 1800 ರ ದಶಕದಲ್ಲಿ ಸಮೃದ್ಧವಾಗಿದೆ. ಕಲ್ಲಿದ್ದಲಿನ ಸಮೃದ್ಧ ನಿಕ್ಷೇಪಗಳನ್ನು ಇಲ್ಲಿ ಕಂಡುಹಿಡಿಯಲಾಯಿತು.
ಮಿತ್ಸುಬಿಷಿ 1890 ರಲ್ಲಿ ದ್ವೀಪ ಮತ್ತು ಅದರ ಗಣಿಗಳನ್ನು ಖರೀದಿಸಿತು ಮತ್ತು ಕೆಲಸಗಾರರು ಮತ್ತು ಅವರ ಕುಟುಂಬಗಳಿಗೆ ಅಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತು. ಹೆಚ್ಚಿನ ಜನ ಸಂಖ್ಯೆಯು ಅಲ್ಲಿತ್ತು, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕೆಲವರು ಸುಸಜ್ಜಿತ ಮನೆಗಳನ್ನೇ ನಿರ್ಮಿಸಿದರು. ಕ್ರಮೇಣವಾಗಿ ಅಲ್ಲಿ ವಾಸಿಸುವವರ ಪರಿಸ್ಥಿತಿ ಗಂಭೀರವಾಯಿತು. ಗಂಭೀರದ ಉಸಿರಾಟದ ಸಮಸ್ಯೆ ಕಾಡತೊಡಗಿತ್ತು. ಅಂತಿಮವಾಗಿ ಕಲ್ಲಿದ್ದಲು ನಿಕ್ಷೇಪಗಳು ಖಾಲಿಯಾದವು ಮತ್ತು ಅಲ್ಲಿ ಗಣಿಗಾರಿಕೆ ಸಾಧ್ಯವಾಗಲಿಲ್ಲ.
ವಿಶ್ವ ಸಮರ 2 ರ ಸಮಯದಲ್ಲಿ, ಚೀನಾದ ಯುದ್ಧ ಕೈದಿಗಳನ್ನು, ಶೋಷಿತ ಕೋರಿಯಾದ ವಲಸಿಗರೊಂದಿಗೆ ಹಶಿಮಾಗೆ ಸಾಗಿಸಲಾಯಿತು ಮತ್ತು ಗಣಿಗಳಲ್ಲಿ ಕ್ರೂರ ಮತ್ತು ಅಮಾನವೀಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು. ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು, ಮತ್ತು ಸಾವಿರಾರು ಜನರು ಹಸಿವು ಮತ್ತು ಬಳಲಿಕೆಯಿಂದ ಮೃತಪಟ್ಟರು.
ಇದೀಗ ಮತ್ತೆ ಆ ದ್ವೀಪ ಮರುಜೀವ ಪಡೆದುಕೊಂಡಿದ್ದು 2019ರಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ, 2015ರಲ್ಲಿ ಯುನೆಸ್ಕೋ ಪಟ್ಟಿಯಲ್ಲಿ ದ್ವೀಪವನ್ನು ಸೇರಿಸಲಾಯಿತು.