ಕುಡಿಯುವ ನೀರು ಹಾಗೂ ರಸ್ತೆಗೆ ಆದ್ಯತೆ ನೀಡಲಾಗುವುದು – ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ರಸ್ತೆಗೆ ಆದ್ಯತೆ ನೀಡಲಾಗುವುದು. ಹಂತ ಹಂತವಾಗಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು
ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ತಾಲೂಕಿನ ದೊಡ್ಮನೆ ಹಾಗೂ ಕ್ಯಾದಗಿ ಪಂಚಾಯ್ತಿ ವ್ಯಾಪ್ತಿಯ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕರ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕ್ಯಾದಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ವತಿಯಿಂದ ಕಾರ್ಯಕ್ರಮ ಆಯೋಜಿಸಿದ್ದು ಶಾಸಕರನ್ನ ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ್ ಪಂಚಾಯತ್ ವ್ಯಾಪ್ತಿಯಲ್ಲಿನ ಸಮಸ್ಯೆ ಕುರಿತು ಶಾಸಕರ ಗಮನ ಕ್ಕೆ ತಂದು ಗಮನ ಸೆಳೆದರು. ಉಪಾಧ್ಯಕ್ಷೆ ಶಾಂತಲಾ ನಾಯ್ಕ್ ಸರ್ವ ಸದಸ್ಯರು ಹಾಜರಿದ್ದರು. ಹಸ್ವಿಗೊಳಿಯಲ್ಲಿ ವಿಜೃಂಭಣೆಯೊಂದಿಗೆ ಡೊಳ್ಳಿನ ಕುಣಿತದ ಮೂಲಕ ಸ್ವಾಗತಿಸಿದರು ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದರು, ಭೀಮಣ್ಣ ನಾಯ್ಕ್ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಸನ್ಮಾನ ಸ್ವೀಕರಿಸಿದರು. ಊರಿನಲ್ಲಿರುವ ಪ್ರತಿಯೊಂದು ಸಮಸ್ಯೆ ಗಳಿಗೆ ಹಂತಹಂತವಾಗಿ ಅಭಿವೃದ್ಧಿ ಪಡಿಸೋಣ ಎಂದರು ಈರಪ್ಪ ನಾಯ್ಕ್ ಪ್ರಾಸ್ತಾವಿಕ ಮಾತನಾಡಿ ಊರಿನ ಸಮಸ್ಯೆ ಕುರಿತು ತಿಳಿಸಿ, ಪರಿಹಾರಕ್ಕೆ ಬೇಡಿಕೆ ಇಟ್ಟರು ಆಸ್ಪತ್ರೆ ವೈದ್ಯರ ಸಮಸ್ಯೆ ಗಂಭೀರತೆ ಕುರಿತು ಮನವರಿಕೆ ಮಾಡಿದರು. ಸ್ಥಳೀಯ ಪ್ರಮುಖರಾದ ಹರೀಶ, ಕಿರಣ್ ನಾಯ್ಕ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಜಿ.ನಾಗರಾಜ, ಸಿ.ಆರ್.ನಾಯ್ಕ, ಪ್ರಮುಖರಾದ ಎಂ.ಜಿ.ನಾಯ್ಕ ಹಾದ್ರಿಮನೆ, ವಿವೇಕ ಭಟ್, ಬಿ ಆರ್ ನಾಯ್ಕ್, ರಾಮಕೃಷ್ಣ ನಾಯ್ಕ್, ವಿಶ್ವ ಇಟಗಿ, ಸುರೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.