ಸಿದ್ದಾಪುರ : ತಾಲೂಕಿನ ಜನತೆಗೆ ಪಶು ಇಲಾಖೆ ವತಿಯಿಂದ ತುರ್ತು ಚಿಕಿತ್ಸೆ ವಾಹನ ನೀಡಿದ್ದು ಈ ವಾಹನ ಈಗ ತಾಲೂಕಿನಲ್ಲಿ ಸೇವೆ ಒದಗಿಸುತ್ತಿದೆ ಹಲವಾರು ರೈತರು ಈ ಸೇವೆ ಆರಂಭವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನುಡಿಸಿರಿ ವರದಿಗಾರ ದಿವಾಕರ್ ನಾಯ್ಕ್ ಅಧಿಕಾರಿಗಳೊಂದಿಗೆ ಸಂದರ್ಶನ ನಡೆಸಿದರು.
ತುರ್ತು ಪಶು ಚಿಕಿತ್ಸಾ 1962 ವಾಹನದ ಸೌಲಭ್ಯವನ್ನು ರೈತರು ಪಡೆದುಕೊಳ್ಳುವಂತೆ ತುರ್ತು ವಾಹನದ ಚಿಕಿತ್ಸಾ ವೈದ್ಯಧಿಕಾರಿ ನಂದಕುಮಾರ್ ಪೈ ತಿಳಿಸಿದರು. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಸೇವೆ ಸಿಗುತ್ತದೆ ಕರು ಹಾಕುವ ಸಂದರ್ಭದಲ್ಲಿ, ಮೂಳೆ ಮುರಿದಾಗ, ಅಪಘಾತ ವಾದಾಗ ಜೀವಕ್ಕೆ ಅಪಾಯ ವಿರುವ ಸಂದರ್ಭದಲ್ಲಿ 1962 ಗೆ ಕರೆ ಮಾಡಿ ರೈತರು ಇದರ ಉಪಯೋಗ ಪಡೆದುಕೊಳ್ಳಬಹುದು, ಸ್ಥಳ ಕ್ಕೆ ಹೋಗಿ ಚಿಕಿತ್ಸೆ ನೀಡಲಾಗುತ್ತದೆ ಆದರೆ ವಾಹನದಲ್ಲಿ ಆಸ್ಪತ್ರೆ ಗೆ ತರುವ ಸೌಲಭ್ಯ ವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.