ಸೂಳೆಮಕ್ಕಿ ತಿರುವಿನಲ್ಲಿ ಬಸ್‌ ಪಲ್ಟಿ- ಇಬ್ಬರ ದುರ್ಮರಣ

ಹೊನ್ನಾವರ, ಮೇ-03 : ತಾಲೂಕಿನ ಗೇರುಸೊಪ್ಪಾ ಸಮೀಪದಲ್ಲಿರುವ ಸೂಳೆಮಕ್ಕಿ ಕ್ರಾಸ್‌ ಬಳಿ ಖಾಸಗಿ ಬಸ್‌ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ರೆ, 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗೌರಿಬಿದನೂರಿನಿಂದ ಖಾಸಗಿ ಬಸ್‌ನಲ್ಲಿ ಪ್ರವಾಸಕ್ಕೆಂದು ಬಂದಿದ್ದವರು, ಮೊದಲು ಜೋಗ್‌ ಫಾಲ್ಸ್‌ ವೀಕ್ಷಣೆ ಮಾಡಿದ್ದಾರೆ. ಬಳಿಕ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ರು. ಈ ವೇಳೆ ಸೂಳೆಮಕ್ಕಿ ಕ್ರಾಸ್‌ ಬಳಿ ಬರ್ತಿದ್ದಂತೆ, ಚಾಲಕ ಎದುರಿಗೆ ಬಂದ ವಾಹನವನ್ನು ತಪ್ಪಿಸಲು ಹೋಗಿದ್ದಾಗ ಬಸ್‌ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ..

ಪಲ್ಟಿ ಹೊಡೆದ ರಭಸಕ್ಕೆ ಬಸ್‌ ನುಜ್ಜುಗುಜ್ಜಾಗಿದೆ. ಇನ್ನು ಗಾಯಾಳುಗಳನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಹೊನ್ನಾವರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ…