ಕಿತ್ತೂರ ಖಾನಾಪುರ ಒಳಗೊಂಡ ಉತ್ತರಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಷಿಕರ, ಯುವಕರ ಶ್ರೇಯಸ್ಸಿಗೆ ಸಂಸದನಾಗಿ ಆಯ್ಕೆಯಾದ ಮೇಲೆ ಪ್ರಮಾಣಿಕ ಪ್ರಯತ್ನ ಮಾಡಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ ಎಂದು ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ರು..
ಕಾಗೇರಿಯವರು ಅಂಕೋಲಾ ತಾಲೂಕಿನ ಆಗಸೂರು, ಕಲ್ಲೇಶ್ವರ, ಹೆಬ್ಬುಳ, ಹೊಸಾಕಂಬಿ ಮೊಗಟ ಭಾಗಗಳಲ್ಲಿ ಪ್ರಚಾರ ಸಭೆ ನಡೆಸಿ,ಮಾತನಾಡಿ, ರಾಜ್ಯಕ್ಕೆ ಪರಿಚಿತನಾಗಿ, ನಿಮ್ಮ ಜತೆಗೂಡಿ ಬೆಳೆದವನು. ಬಿಜೆಪಿ ಪಕ್ಷದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಕಿತ್ತೂರ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮದಾರ್ ಮತ್ತು ಅವರ ಕುಟುಂಬಸ್ಥರು ಮತ್ತು ಅಪಾರ ಬೆಂಬಲಿಗರು ನರೇಂದ್ರ ಮೋದಿ ಬೆಂಬಲಕ್ಕೆ ಬಿಜೆಪಿ ತತ್ವ-ಸಿದ್ದಾಂತ ಒಪ್ಪಿ ಬಂದಿರುವುದು ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. ಅಲ್ಲದೇ, ಕಿತ್ತೂರ, ಖಾನಾಪುರ ಮಾಜಿ ಶಾಸಕರು ಬಿಜೆಪಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ನೆರವಿಗೆ ನಮ್ಮ ನೆಚ್ಚಿನ ಕಾರ್ಯಕರ್ತರು ಹೆಗಲಿಗೆ ಹೆಗಲು ನೀಡಿದ್ದಾರೆ ಎಂದು ಹೇಳಿದ್ರು..
ಒಟ್ಟಿನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಂಕೋಲ ತಾಲೂಕಿನ ವಿವಿಧ ಸ್ಥಳಗಳಲ್ಲಿ ಪ್ರಚಾರ ಭಾಷಣ ನಡೆಸಿ ಮತ ಯಾಚಿಸಿದ್ರು…