ವಾಕಿಂಗ್ ಮಾಡುವವರಿಗೆ ಸೂಚನೆ ನೀಡಿದ ಪೋಲಿಸ್ ಇಲಾಖೆ


ಅಂಕೋಲಾ: ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರ ಮೇಲೆ ವಾಹನಗಳು ಹಾಯ್ದು ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆದ್ದಾರಿಗಳಲ್ಲಿ ವಾಕಿಂಗ್ ಮಾಡದಂತೆ ಪೊಲೀಸ್ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ.
2023ರ ಡಿಸೆಂಬರ್ 26 ರಂದು ಅವರ್ಸಾ ಕಾತ್ಯಾಯನಿ ಹೈಸ್ಕೂಲು ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ವಾಕಿಂಗ್ ಮಾಡುತ್ತಿದ್ದ ಪಾದಾಚಾರಿಯೊಬ್ಬರ ಮೇಲೆ ವಾಹನ ಹರಿದು ಮೃತಪಟ್ಟಿದ್ದರು.
ಜನವರಿ 14ರಂದು ಕೊಟೆವಾಡ ಪಿಕಾಕ ರೆಸ್ಟೋರೆಂಟ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-66ರಲ್ಲಿಯೇ ವಾಕಿಂಗ್ ತೆರಳಿದ ಪಾದಾಚಾರಿಯೊಬ್ಬರು ವಾಹನ ಹಾಯ್ದು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನಲೆ ಸಾರ್ವಜನಿಕ ಹಿತಾಸಕ್ತಿಗೆ ಸೂಚನೆ ಹೊರಡಿಸಲಾಗಿದೆ.
ಬೆಳಗಿನ ಸಮಯದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವ ಸ್ಥಳದಲ್ಲಿ ವಾಕಿಂಗ್ ಮಾಡುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ ಮಾಡುವುದುರಿಂದ ಅಫಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪಾರ್ಕನಲ್ಲಿ, ಮೈದಾನಗಳಲ್ಲಿ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ವಾಕಿಂಗ್ ಮಾಡಬೇಕು ಎಂದು ಸೂಚಿಸಲಾಗಿದೆ.

ನುಡಿಸಿರಿ ಜಾಗೃತಿ.

ತಾಲ್ಲೂಕಿನಲ್ಲಿ ವಾಕಿಂಗ್ ತೆರಳಿದ ವೇಳೆಯಲ್ಲಿ ವಾಹನ ಬಡಿದು ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ನಾಲ್ಕು ದಿನಗಳ ಹಿಂದೆ ನುಡಿಸಿರಿ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈಗ ಸಾರ್ವಜನಿಕ ಹಿತಾಸಕ್ತಿಗಾಗಿ ಪೊಲೀಸ್ ಇಲಾಖೆ ಮುಂದಾಗಿ ಸೂಚನೆ ನೀಡಿದೆ.