ಹೊನ್ನಾವರ: ಪಟ್ಟಣದ ಶರಾವತಿ ವೃತ್ತದಲ್ಲಿ ಜಾದೂಗಾರ್ ಕುಟುಂಬದಿಂದ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶೃದ್ದಾಂಜಲಿ ವಾಹನವು ಶುಕ್ರವಾರ ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ . ರಾಜೇಶ ಕಿಣಿ ಮಾತನಾಡಿ ಜನಸಾಮನ್ಯರ ನೋವಿನ ಸಮಯದಲ್ಲಿ ತೀರಾ ಅಗತ್ಯವಿರುವ ವಾಹನ ಇದಾಗಿದೆ. ಉಚಿತ ವಾಹನವಾದರೂ ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಅನೂಕೂಲವಾಗಲಿದೆ ಎಂದರು.ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ತುಂಬಾ ಕಷ್ಟಪಟ್ಟು ದುಡಿದು, ಜನತೆಗೆ ಅನೂಕೂಲವಾಗಲಿ ಎಂದು ಈ ವಾಹನ ಜನಸೇವೆಗೆ ಮೀಸಲಾಗಿರಿಸಿದ್ದಾರೆ. ಕಲಾವಿದರಾಗಿ, ಬಜೆ ಅಂಗಡಿ ತೆರದು ಜೀವನ ನಡೆಸುತ್ತಿರುವ ಜಾದುಗಾರ ಕುಟುಂಬದ ಕೊಡುಗೆ ಅನನ್ಯವಾಗಿದ್ದು, ಸಾರ್ವಜನಿಕರು ಸಹಕಾರ ನೀಡಿದರೆ ಜಿಲ್ಲೆಯೆಲ್ಲಡೆ ವಿಸ್ತರಿಸಬಹುದು ಎಂದರು.ಉದ್ದಿಮೆದಾರರು ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ ಅಂಕೋಲಾ ಮಾತನಾಡಿ ಮನುಷ್ಯ ಹುಟ್ಟಿದ ಮೇಲೆ ಸಾವು ಸಹಜ. ಆದರೆ ಮೃತಪಟ್ಟ ಬಳಿಕ ಅವನ ಅಂತಿಮಯಾತ್ರೆಯು ಗೌರವಯುತವಾಗಿ ನಡೆಸಲು ಕೈಗೊಂಡ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ವೈಯಕ್ತಿಕವಾಗಿ ನೆರವು ಘೋಷಿಸಿದರು.
ಶ್ರೀ ರಾಮ್ ಜಾದುಗಾರ ಮಾತನಾಡಿ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಮಡಿಕೆ, ಬಿದಿರು, ಬಟ್ಟೆ, ಸೇರಿದಂತೆ ಹಲವು ಪರಿಕರವನ್ನು ಇಲ್ಲಿ ಇರಲಿದೆ. ದಿನವಿಡೀ ಸೇವೆ ಇದ್ದು, ಸಾರ್ವಜನಿಕರು ಮಾಹಿತಿ ನೀಡಿದರೆ ಅಂತ್ಯಸಂಸ್ಕಾರದ ಸ್ಥಳಕ್ಕೆ ಕರೆದ್ಯೊಯಲಿದೆ. ಮುಂದಿನ ದಿನದಲ್ಲಿ ಜಿಲ್ಲೆಯಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ ಎಂದರು.ವಾಹನ ಸಿದ್ದಪಡಿಸಿದ ರಾಘವೇಂದ್ರ ಆಚಾರ್ಯ ಇವರನ್ನು ಜಾದುಗಾರ ಕುಟುಂಬದವರು ಹಾಗೂ ಗಣ್ಯರು ಸನ್ಮಾನಿಸಿದರು. ತಾಲೂಕ ಪತ್ರಕರ್ತ ಸಂಘದವರು ಜಾದುಗರ್ ದಂಪತಿಯವರನ್ನು ಸನ್ಮಾನಿಸಿದರು.
ಉದ್ದಿಮೆದಾರರಾದ ಸಂದೀಪ ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ, ಮಾಜಿ ತಾ.ಪಂ.ಸದಸ್ಯ ತುಕಾರಾಂ ನಾಯ್ಕ, ಮೀನುಗಾರ ಮುಖಂಡ ಉಮೇಶ ಮೇಸ್ತ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಸಾಮಾಜಿಕ ಕಾರ್ಯಕರ್ತ ರಾಜು ಮಾಸ್ತಿಹಳ್ಳ, ಮಂಗಲದಾಸ ನಾಯ್ಕ ಮತ್ತಿತರರು ಇದ್ದರು.