ಕುಮಟಾದ ಸ.ಹಿ.ಪ್ರಾ ಶಾಲೆ ಗುಡಿಗಾರಗಲ್ಲಿಯಲ್ಲಿ ಶತಮಾನೋತ್ತರ ಸಂಭ್ರಮದ ಲಾಂಛನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಬಿಡುಗಡೆಗೊಳಿಸಿದರು.ಕುಮಟಾದ ಸ.ಹಿ.ಪ್ರಾ ಶಾಲೆ ಗುಡಿಗಾರಗಲ್ಲಿಯಲ್ಲಿ ಶತಮಾನೋತ್ತರ ಸಂಭ್ರಮದ ಲಾಂಛನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ತಮ್ಮ ಅಮೃತಹಸ್ತದಿಂದ ಬಿಡುಗಡೆಗೊಳಿಸಿದರು.
1909 ರಲ್ಲಿ ಕುಮಟಾದ ಗುಡಿಗಾರಗಲ್ಲಿಯಲ್ಲಿ ಆರಂಭವಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂಬರುವ 2024 ಫೆಬ್ರುವರಿ 19,20 ಮತ್ತು 21 ರಂದು ಮೂರು ದಿನಗಳ ಕಾಲ ಶತಮಾನೋತ್ತರ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ಯೋಜಿಸಲಾಗಿದೆ. ಈ ಕುರಿತಾಗಿ ಪೂರ್ವಭಾವೀ ಸಭೆ ನಡೆಸಿ ಶತಮಾನೋತ್ತರ ಸಂಭೃಮ ಸಮೀತಿ ಹಾಗೂ ಅವಶ್ಯಕ ಉಪಸಮೀತಿಗಳನ್ನು ರಚಿಸಲಾಗಿದ್ದು ಸಮೀತಿಯ ಅಧ್ಯಕ್ಷರು ಹಾಗೂ ಸದಸ್ಯರು ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸನ್ನಿಧಾನದಲ್ಲಿ ಶ್ರೀ ಸಂಸ್ಥಾನ ಎಡನೀರು ಮಠದ ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಫಲತಾಂಬೂಲ ಸಮರ್ಪಿಸಿ, ‘ಶತಮಾನೋತ್ತರ ಸಂಭೃಮ’ದಲ್ಲಿ ಪಾಲ್ಗೊಳ್ಳಲು ನಿವೇದಿಸಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಶತಮಾನೋತ್ತರ ಸಂಭ್ರಮದ ಆಕರ್ಷಕ ‘ಲಾಂಛನ’ವನ್ನು ಬಿಡುಗಡೆಗೊಳಿಸಿದರು. ಲಾಂಛನ ಬಿಡುಗಡೆ ಮಾಡಿದ ಶ್ರೀಗಳು ಹರ್ಷ ವ್ಯಕ್ತಪಡಿಸಿ, ಶತಮಾನೋತ್ತರ ಸಂಭ್ರಮದ ಮೂರೂ ದಿನಗಳ ಕಾರ್ಯಕ್ರಮಗಳಂದು ತಾವು ಉಪಸ್ಥಿತರಿರುವುದಾಗಿ ತಿಳಿಸಿದರು. ಬಳಿಕ ಕಾರ್ಯಕ್ರಮ ಯಶಸ್ವಿಯಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ, ಆಶೀರ್ವಚನ ನೀಡಿ ಶುಭಹಾರೈಸಿದರು.
ಈ ವೇಳೆ ಶತಮಾನೋತ್ತರ ಸಂಭೃಮ ಸಮೀತಿಯ ಗೌರವಾಧ್ಯಕ್ಷರಾದ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಬಾಬಾ ಪೈ, ಸಮಿತಿಯ ಅಧ್ಯಕ್ಷ ಡಿ.ಡಿ.ಶೇಟ್,ಕಾರ್ಯಾಧ್ಯಕ್ಷ ಮಂಜುನಾಥ ಎನ್.ರಾಯ್ಕರ್,ಎಂ.ಬಿ.ಪೈ,ಡಾ.ಜಿ.ಜಿ.ಹೆಗಡೆ,ಪುರಸಭಾ ಸದಸ್ಯ ಎಮ್.ಟಿ.ನಾಯ್ಕ,ಸ್ವಾಗತ ಸಮಿತಿ ಅಧ್ಯಕ್ಷ ಪ್ರಶಾಂತ ನಾಯ್ಕ,ಸಮನ್ವಯಾಧಿಕಾರಿ ರೇಖಾ ನಾಯ್ಕ,ಅರ್ಚಕರಾದ ರಾಜು ಗುನಗ,ಪ್ರಶಾಂತ ಗುನಗ,ಎಸ್.ಡಿ.ಎಂ.ಸಿ.ಸದಸ್ಯರು,ಮುಖ್ಯಾಧ್ಯಾಪಕ ಡಿ.ಎಮ್.ಬಂಟ, ಶಾಲಾ ಶಿಕ್ಷಕ ವೃಂದ,ವಿವಿಧ ಸಮಿತಿಯ ಅಧ್ಯಕ್ಷರು,ಸದಸ್ಯರು,ಸ್ಥಾನಿಕರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.