ಸಾಂತಗಲ್‌ ಜಲಶುಧ್ಧೀಕರಣ ಘಟಕದಲ್ಲಿ ಜಲ ದೀಪಾವಳಿ ಕಾರ್ಯಕ್ರಮ

ಕುಮಟಾದ ಸಾಂತಗಲ್ ಜಲಶುಧ್ಧಿಕರಣ ಘಟಕದಲ್ಲಿ ಹೊನ್ನಾವರ ಪಟ್ಟಣ ಪಂಚಾಯತ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ನೀರು, ನೀರಿಗಾಗಿ ಮಹಿಳೆಯರು ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುಡಿಯುವ ನೀರಿನ ಮಹತ್ವದ ಕುರಿತು ಸ್ವ ಸಹಾಯ ಸಂಘಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಕುಮಟಾದ ಸಾಂತಗಲ್ ಜಲಶುಧ್ಧಿಕರಣ ಘಟಕದಲ್ಲಿ, ಸರ್ಕಾರದ ಆದೇಶದಂತೆ ಜಲ ದೀಪಾವಳಿ ಕಾರ್ಯಕ್ರಮದಡಿ ಹೊನ್ನಾವರ ಪಟ್ಟಣ ಪಂಚಾಯತ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ನೀರು, ನೀರಿಗಾಗಿ ಮಹಿಳೆಯರು ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ.ನಾಯ್ಕ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವದ ಕುರಿತು ವಿವರಿಸಿದರು. ಬಳಿಕ ಕಿರಿಯ ಅಭಿಯಂತರರಾದ ಉಮೇಶ ಮಡಿವಾಳ ಮಾತನಾಡಿ ಕುಡಿಯುವ ನೀರು ಹೊಳೆಯಿಂದ ಹೇಗೆ ಸಂರಕ್ಷಿಸಿ, ಶುದ್ದಿಕರಿಸಿ ವಿತರಿಸಲಾಗುತ್ತದೆ ಎಂಬುವುದರ ಕುರಿತು ವಿವರಿಸಿದರು. ಸರ್ಕಾರದ ಈ ಕಾರ್ಯಕ್ರಮಕ್ಕೆ ಸ್ವ ಸಹಾಯ ಸಂಘದ ಮಹಿಳೆಯರು ಮೆಚ್ಚುಗೆ ವ್ಯಕ್ತ ಪಡಿಸಿದ್ರು.. ಈ ವೇಳೆ ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ, ಸಮುದಾಯ ಸಂಘಟನಾಧಿಕಾರಿ ಜೋನ್ ಲೋಪಿಸ್, ಶಕುಂತಲಾ ನಾಯ್ಕ ಹಾಗೂ ಸ್ವ ಸಹಾಯ ಸಂಘದ ಸದಸ್ಯರು, ಪಟ್ಟಣ ಪಂಚಾಯತ ಸಿಬ್ಬಂದಿಗಳು ಹಾಗೂ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.