ಭಟ್ಕಳದಲ್ಲಿ ಆಟೋ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ, ಆಟೋ ಚಾಲಕನ ಸ್ಥಿತಿ ಗಂಭೀರ

ಭಟ್ಕಳ ಶಂಸುದ್ದಿನ್ ಸರ್ಕಲ್ ಸಮೀಪ ಆಟೋ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಭಟ್ಕಳ, ಮಾರ್ಚ್‌ 27 – ಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು, ಮಾಸ್ಟರ್ ಕಾಲೋನಿ‌ ನಿವಾಸಿ ಸುಹೇಲ್ ಎಂದು ತಿಳಿದು ಬಂದಿದೆ. ಈತ ರಂಗಿನಕಟ್ಟೆ ಕಡೆಯಿಂದ ಭಟ್ಕಳದ ಕಡೆ ಬರುತ್ತಿದ್ದ ವೇಳೆ ಶಿವಮೊಗ್ಗದಿಂದ ಕೊಲ್ಲೂರು ಮಾರ್ಗದಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ…

ಡಿಕ್ಕಿ ರಭಸಕ್ಕೆ ಆಟೋ ಮುಂಭಾಗ ಜಖಂಗೊಂಡಿದೆ. ತಕ್ಷಣ ಆಟೋ  ಚಾಲಕನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಕುಂದಾಪುರಕ್ಕೆ ರವಾನಿಸಲಾಗಿದೆ.

ನಂತರ ಅಪಘಾತದ ಸ್ಥಳಕ್ಕೆ ಭಟ್ಕಳ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಖಾಸಗಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ…