ಕುಮಟಾ(Kumta) ತಾಲ್ಲೂಕಿನ ತಾರೀಬಾಗಿಲು ಹೆಗಡೆ ಸಂಪರ್ಕಿಸುವ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಸೇತುವೆ(Bridge) ಕೆಳಗಿದ್ದ ಟ್ರಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆಯ ಕಳಪೆ ಕಾಮಗಾರಿ ಕಂಡು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ, ಮಾ.27: ಜಿಲ್ಲೆಯ ಕುಮಟಾ(Kumta) ತಾಲ್ಲೂಕಿನ ತಾರೀಬಾಗಿಲು ಮತ್ತು ಹೆಗಡೆ ಸಂಪರ್ಕಿಸುವ ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಸೇತುವೆ(Bridge) ಕೆಳಗಿದ್ದ ಟ್ರಕ್ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಘನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಈ ವೇಳೆ ಪಿಲ್ಲರ್‌ಗಳ ನಡುವೆ ಸೇತುವೆಗೆ ಹಾಕಲಾಗಿದ್ದ ಸ್ಲ್ಯಾಬ್‌ಗಳು ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆಯೇ ಕುಸಿದುಬಿದ್ದಿದೆ. ಸೇತುವೆಯ ಕಳಪೆ ಕಾಮಗಾರಿ ಕಂಡು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಿರ್ಮಾಣ ಹಂತದ ಸೇತುವೆ ಕುಸಿತದಿಂದ ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದನ್ನು ಕೇಳಿ ಗುತ್ತಿಗೆದಾರ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಗ್ರಾಮಸ್ಥರು ‘ನೀವು ಕಳಪೆ ಕಾಮಗಾರಿ ಮಾಡಿ ಸೇತುವೆ ನಿರ್ಮಿಸಿ ಹೋದರೆ, ನಮ್ಮ ಗ್ರಾಮದ ಜನರು ಜೀವ ತೆರಬೇಕಿತ್ತು. ಪುಣ್ಯಕ್ಕೆ ನಿಮ್ಮ ಕಳಪೆ ಕೆಲಸದಿಂದ ನಿರ್ಮಾಣ ಹಂತದಲ್ಲಿರುವಾಗಲೇ ಸೇತುವೆ ಕುಸಿತವಾಗಿದೆ. ನಿಮ್ಮ ವಿರುದ್ಧ ದೂರು ದಾಖಲಿಸುತ್ತೇವೆ. ಜೊತೆಗೆ, ಗುಣಮಟ್ಟ ಪರಿಶೀಲನೆ ಮಾಡುವುದಕ್ಕೆ ದೂರು ನೀಡುತ್ತೇವೆ ಎಂದು ಕಿಡಿಕಾರಿದ್ದಾರೆ.