ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್​: ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ ಮಾಡಿದೆ. ಭಟ್ಕಳ ಪಟ್ಟಣದ ತಕಿಯಾ ಸ್ಟ್ರೀಟ್‌ನಲ್ಲಿರುವ ಶಂಕಿತ ಉಗ್ರ ಇಕ್ಬಾಲ್‌ ಭಟ್ಕಳ ಪುತ್ರ ಅಬ್ದುಲ್ ರಬಿ ಮನೆ ಮೇಲೆ ದಾಳಿ ಮಾಡಲಾಗಿದೆ. ಬಾಂಬರ್ ವಯಸ್ಸು ಅಬ್ದುಲ್ ರಬಿಗೆ ಹೋಲಿಕೆಯಾಗುವ ಹಿನ್ನೆಲೆ ಸ್ಥಳೀಯ ಪೊಲೀಸರ ಸಹಕಾರದಿಂದ ಬೆಂಗಳೂರಿನ ಎನ್‌ಐಎ ತಂಡ ದಾಳಿ ಮಾಡಿದೆ.

ಭಟ್ಕಳ, ಮಾರ್ಚ್​​ 27 : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ (Rameshwaram Cafe blast case) ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ ಮಾಡಿದೆ. ಭಟ್ಕಳ ಪಟ್ಟಣದ ತಕಿಯಾ ಸ್ಟ್ರೀಟ್‌ನಲ್ಲಿರುವ ಶಂಕಿತ ಉಗ್ರ ಇಕ್ಬಾಲ್‌ ಭಟ್ಕಳ ಪುತ್ರ ಅಬ್ದುಲ್ ರಬಿ ಮನೆ ಮೇಲೆ ದಾಳಿ ಮಾಡಲಾಗಿದೆ. ಬಾಂಬರ್ ವಯಸ್ಸು ಅಬ್ದುಲ್ ರಬಿಗೆ ಹೋಲಿಕೆಯಾಗುವ ಹಿನ್ನೆಲೆ ಸ್ಥಳೀಯ ಪೊಲೀಸರ ಸಹಕಾರದಿಂದ ಬೆಂಗಳೂರಿನ ಎನ್‌ಐಎ ತಂಡ ದಾಳಿ ಮಾಡಿದೆ. ನಾಳೆ ಬೆಂಗಳೂರಿನ NIA ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಸದ್ಯ ಭಟ್ಕಳ ಪಟ್ಟಣದಲ್ಲಿ ಎನ್‌ಐಎ ಅಧಿಕಾರಿಗಳ ದಾಳಿ ಸಂಚಲನ ಮೂಡಿಸಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ವಿಚಾರವಾಗಿ ಬೆಂಗಳೂರಿನ 5 ಕಡೆ ಎನ್​ಐಎ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಶಂಕಿತರ ಮನೆಗಳ ಮೇಲೆ ದಾಳಿ ಮಾಡಿರುವ ಎನ್​ಐಎ ಮುಂಜಾನೆಯಿಂದಲೇ ಮನೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ 5ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಮಾಡಿದ್ದು, ಶಂಕಿತರ ಮನೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ಎನ್​ಐಎ ದಾಳಿ, ಪರಿಶೀಲನೆ ಮಾಡಲಾಗಿದೆ.

ಅದೇ ರೀತಿಯಾಗಿ ಚೆನ್ನೈನ ಮೂರು ಕಡೆ ಎನ್​ಐಎ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಶಂಕಿತರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪ ಹಿನ್ನೆಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ.