ಸತೀಶ ಸೈಲ್ ಆಪ್ತರು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ, ತವರಿನಲ್ಲೇ ಸೈಲ್ ಗೆ ಮುಖಭಂಗ

ಕಾರವಾರ-ಮೇ 03 : ಕಾಂಗ್ರೆಸ್ ಪಕ್ಷದ ಮಾಜಾಳಿ ಗ್ರಾಪಂನ ಇಬ್ಬರು ಸದಸ್ಯರು, ಕಾಂಗ್ರೆಸ್ ಶಾಸಕರ ಆಪ್ತರು, ಇತರ ಪ್ರಮುಖರು ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಶಾಸಕ ಸತೀಷ ಸೈಲಗೆ ತಮ್ಮ ಊರಿನಲ್ಲೇ ಮುಖಭಂಗ ಆದಂತಾಗಿದೆ.

ಕಾಂಗ್ರೆಸ್ ಶಾಸಕರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಾಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಮ ನಾಯ್ಕ ಹಾಗೂ ಇತರರು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್ ಹಾಗೂ ಶಾಸಕರಿಗೆ ಆಘಾತ ನೀಡಿದ್ದಾರೆ.

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ರೂಪಾಲಿ ಎಸ್.ನಾಯ್ಕ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಕಾರ್ಯಕರ್ತರು, ಪದಾಧಿಕಾರಿಗಳಿಗೆ ಅವರು ಸ್ಪಂದಿಸುವ ರೀತಿ, ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿರುವುದರಿಂದ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತದಿಂದ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾಗಿ ಅವರು ತಿಳಿಸಿದರು.

ಪ್ರದೀಪ ಕದಂ, ಆಕಾಶ ಕಾಂಬ್ಳೆ, ಪ್ರಸನ್ನ ಕಾಂಬ್ಳೆ, ಮಯೂರ್ ಶಾ, ಸುಧೇಶ ರಾಯ್ಕರ, ಶಾನು ನಾಯ್ಕ, ಯೋಗೇಶ ನಾಯ್ಕ, ಪ್ರಶಾಂತ ನಾಯ್ಕ, ಸಂತೋಷ ನಾಯ್ಕ, ಸಾಕ್ಷಿ ನಾಯ್ಕ, ರಮೇಶ ನಾಯ್ಕ, ರಶ್ಮಿ ನಾಯ್ಕ, ರಕ್ಷಾ ನಾಯ್ಕ, ರೋಹಿತ್ ನಾಯ್ಕ, ಹರಿ ನಾಯ್ಕ, ಪುರುಷೋತ್ತಮ ನಾಯ್ಕ, ರಾಜೇಶ ಬಾಂದೇಕರ, ವೈಷ್ಣವಿ ನಾಯ್ಕ, ಕಾಶೀಶ್ ನಾಯ್ಕ, ಮಾಧುರಿ ನಾಯ್ಕ, ಚೈತ್ರಾ ನಾಯ್ಕ, ತಾರಾ ನಾಯ್ಕ ಹಾಗೂ ಪೂಜಾ ದೇಸಾಯಿ ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದವರಾಗಿದ್ದಾರೆ.

ಇವರು ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರುವುದರೊಂದಿಗೆ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷ ಇನ್ನಷ್ಟು ಬಲವರ್ಧನೆಗೊಂಡಂತಾಗಿದೆ.