ಬಿಜೆಪಿ ಮೇಲೆ ಮುನಿಸಿಲ್ಲ.. ನನ್ನ ವಿರುದ್ಧ ಹರಿದಾಡಿದ್ದು ಸುಳ್ಳು ಸುದ್ದಿ – ಸೂರಜ್‌ ನಾಯ್ಕ ಸ್ಪಷ್ಟನೆ

ವಿಶ್ವೇಶ್ವರ ಹೆಗಡೆ ನಾಮಪತ್ರ ಸಲ್ಲಿಕೆ ವೇಳೆ ಅರ್ಧಕ್ಕೆ ಸೂರಜ್‌ ನಾಯ್ಕ ಸೋನಿ ತೆರಳಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ಸ್ಪಷ್ಟನೆ ಕೊಟ್ಟಿರುವ ಸೂರಜ್‌ ನಾಯ್ಕ ಸೋನಿ, ನನಗೆ ಬಿಜೆಪಿ ಪಕ್ಷದ ಮೇಲೆ ಯಾವುದೇ ಮುನಿಸಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕುಮಟಾ, ಏಪ್ರಿಲ್‌ 13 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಶುಕ್ರವಾರ ಕಾರವಾರದಲ್ಲಿ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಗೇರಿ, ಭವ್ಯ ಮೆರವಣಿಗೆ ನಡೆಸಿದ್ರು. ಈ ಮೆರವಣಿಗೆಯಲ್ಲಿ ಸೂರಜ್‌ ನಾಯ್ಕ ಸೋನಿ ಕೂಡ ಪಾಲ್ಗೊಂಡಿದ್ರು. ಆದ್ರೆ ಮರವಣಿಗೆ ಮಧ್ಯೆಯೇ ಸೂರಜ್‌ ನಾಯ್ಕ ಹೊರ ಹೋಗಿದ್ದರು.

ಮೆರವಣಿಗೆ ವಾಹನದಲ್ಲಿ ಸೂರಜ್‌ ನಾಯ್ಕ ಫೋಟೋ ಹಾಕಿರಲಿಲ್ಲ. ಇದೇ ಕಾರಣಕ್ಕೆ ಅರ್ಧಕ್ಕೆ ತೆರಳಿದ್ದಾರೆ ಅನ್ನೋ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಕೆಲವರು ಇದಕ್ಕೆ ಇಲ್ಲ ಸಲ್ಲದ ರೆಕ್ಕೆ ಪುಕ್ಕ ಕಟ್ಟಿ ವರದಿ ಮಾಡಿದ್ರು. ಆದ್ರೀಗ ಸ್ವತಃ ಸೂರಜ್‌ ನಾಯ್ಕ ಸೋನಿ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ…

ನನ್ನ ಆತ್ಮೀಯ ಸ್ನೇಹಿತರ ಮದುವೆಯ ಕಾರ್ಯಕ್ರಮಕ್ಕೆ ಭಾಗವಹಿಸಲು ಡಿಸಿ  ಕಛೇರಿಯಿಂದ ಕುಮಟಾ ಕಡೆ ಪ್ರಯಾಣ ಬೆಳೆಸಿದೆ. ನನಗೆ ಯಾವುದೇ ರೀತಿಯಲ್ಲಿ ಬಿಜೆಪಿ ಪಕ್ಷದ ಪರ ಮುನಿಸಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಬಂದ ವರದಿ ಅಪ್ಪಟ ಸುಳ್ಳು ಎಂದಿದ್ದಾರೆ…

ಒಟ್ನಲ್ಲಿ ಸೂರಜ್‌ ನಾಯ್ಕ ಸೋನಿ ಮೆರವಣಿಗೆ ಅರ್ಧಕ್ಕೆ ವಾಪಸ್‌ ಆಗಿದ್ದು ಹಲವು ಅಂತೆ ಕಂತೆ, ವದಂತಿಗಳಿಗೆ ಕಾರಣವಾಗಿತ್ತು. ಇದೇ ಸಮಯದಲ್ಲಿ ಕೆಲವರು ಇಲ್ಲ ಸಲ್ಲದ ರೆಕ್ಕೆಪುಕ್ಕ ಕಟ್ಟಿ ಸುದ್ದಿ ಹರಡಿಸಿದ್ರು. ಆದ್ರೀಗ ಸ್ವತಃ ಜೆಡಿಎಸ್‌ ನಾಯಕ ಸ್ಪಷ್ಟನೆ ಕೊಟ್ಟು ಗೊಂದಲಗಳಿಗೆ ತೆರೆ ಎಳೆದಿದ್ದಾರೆ….