ಅಂಕೋಲಾ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಟ್ಟಾರೆ ಫಲಿತಾಂಶ 95% ಆಗಿದೆ.
ಕಲಾ ವಿಭಾಗದ ವಿದ್ಯಾರ್ಥಿನಿಯರಾದ ಸರಿತಾ ಸುಕ್ರು ಗೌಡ(95%), ಶಿವಾನಿ ಕುಣಬಿ (93.33%) ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಬುದ್ದು ಗೌಡ(92.33%) ಮತ್ತು ವನುಷಾ ಗೌಡ(92.33%) ವೈಯಕ್ತಿಕ ಫಲಿತಾಂಶ ಗಳಿಸುವ ಮೂಲಕ ಕಾಲೇಜಿಗೆ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾವಿಭಾಗದಲ್ಲಿ ತ್ರಿವೇಣಿ ಗೌಡ(91.05%), ರಚನಾ ಆಗೇರ (91.05%), ವಾಣಿಜ್ಯ ವಿಭಾಗದಲ್ಲಿ ಪೂರ್ಣಿಮ ಗೌಡ (92.16%), ಅಪೇಕ್ಷಾ ವಂದಿಗೆ (91.33%) ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಜಿತ್ ನಾಯ್ಕ(91.83%), ಮಂದಾರ ಗೌಡ (90%) ಕ್ರಮವಾಗಿ ಕಾಲೇಜಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕಲಾವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟು 152 ವಿದ್ಯಾರ್ಥಿಗಳಲ್ಲಿ 150, ವಾಣಿಜ್ಯ ವಿಭಾಗದ ಒಟ್ಟು 115 ವಿದ್ಯಾರ್ಥಿಗಳಲ್ಲಿ 108 ಹಾಗೂ ವಿಜ್ಞಾನ ವಿಭಾಗದ ಒಟ್ಟು 92 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.