ಹೊನ್ನಾವರ, ಏಪ್ರಿಲ್ 10 : 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳು ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಅಗ್ರಸ್ಥಾನ ಸಂಪಾದಿಸಿದ್ದು, ಉಡುಪಿ 2ನೇ ಸ್ಥಾನ ಪಡೆದಿದ್ರೆ, ವಿಜಯಪುರ 3ನೇ ಸ್ಥಾನ ಸಂಪಾದಿಸಿದೆ. ಇನ್ನು ನಮ್ಮ ಉತ್ತರ ಕನ್ನಡ ಜಿಲ್ಲೆ 4ನೇ ಸ್ಥಾನದಲ್ಲಿದೆ. ಹೆಮ್ಮೆಯ ವಿಚಾರ ಏನು ಅಂದ್ರೆ ನಮ್ಮ ಹೊನ್ನಾವರದ ಸಾನ್ವಿ ರಾವ್, ವಾಣಿಜ್ಯ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದಾರೆ…
ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಸಾನ್ವಿ ರಾವ್, 600ಕ್ಕೆ 595 ಅಂಕಗಳಿಸಿದ್ದಾರೆ. ಎಕಾನಿಮಿಕ್ಸ್, ಬ್ಯುಸ್ನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್, ಸಂಸ್ಕೃತದಲ್ಲಿ 100ಕ್ಕೆ 100 ಅಂಗಳನ್ನು ಸಂಪಾದಿಸಿರುವ ಸಾನ್ವಿ, ಇಂಗ್ಲೀಷ್‌ನಲ್ಲಿ ಮಾತ್ರ 100ಕ್ಕೆ 95 ಅಂಕಗಳನ್ನು ಗಳಿಸಿದ್ದಾರೆ..
ಕ್ಯಾನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಜಗದೀಶ್ ರಾವ್ ಮತ್ತು ಹೊನ್ನಾವರ ಐಟಿ ಕಾಲೇಜಿನ ಪ್ರಾದ್ಯಾಪಕರಾಗಿರುವ ವಿನುತಾ ಭಟ್ ಅವರ ಪುತ್ರಿಯಾಗಿರುವ ಸಾನ್ವಿ ರಾವ್, ಪ್ರಬಾತ್‌ನಗರ ನಿವಾಸಿಯಾಗಿದ್ದಾರೆ. ಸಾನ್ವಿ ರಾವ್ ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ.. ಭರತ ನಾಟ್ಯ, ಯಕ್ಷಗಾನ, ಸಂಗೀತ, ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ಕವನ ಬರಹ, ಚೆಸ್ ಪಟುವಾಗಿ ಗುರುತಿಸಿಕೊಂಡ ಬಹುಮುಖ ಪ್ರತಿಭೆ.
ತಮ್ಮ ಯಶಸ್ಸಿನ ಬಗ್ಗೆ ನುಡಿಸಿರಿ ವಾಹಿನಿಯೊಂದಿಗೆ ಮಾತನಾಡಿದ ಸಾನ್ವಿ ರಾವ್, ಮೊಟ್ಟ ಮೊದಲು ನನ್ನ ಈ ಸಾಧನೆಗೆ ದೇವರನ್ನು ವಂದಿಸುತ್ತಿದ್ದೇನೆ. ಇದಕ್ಕೆ ಪ್ರೋತ್ಸಾಹ ನೀಡಿದ ಕ್ರಿಯೇಟಿವ್ ಪಿಯು ಕಾಲೇಜಿನ ಶಿಕ್ಷಕ ವೃಂದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೇ ಪ್ರತಿ ಕ್ಷಣದಲ್ಲೂ ನನ್ನೊಂದಿಗಿದ್ದು ಸದಾ ಪ್ರೋತ್ಸಾಹ ನೀಡಿದ ತಂದೆ, ತಾಯಿ, ಅಣ್ಣ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..