ಯಲ್ಲಾಪುರ, ಏಪ್ರಿಲ್ 07 : ತಾಲೂಕಿನಲ್ಲಿ ವಾಸ್ತವ್ಯದ ಮನೆ ಸಮೀಪ ಬಂದಿದ್ದ 13 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ…
ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.
ಸ್ಥಳದಲ್ಲಿ ಎಸಿಎಫ್ ಆನಂದ, ಆರ್.ಎಪ್.ಒ. ಎಲ್.ಎ.ಮಠ್ ಮೊದಲಾದವರಿದ್ರು. ದೇಹಳ್ಳಿ ವಲಯ ಅರಣ್ಯ ಸಂರಕ್ಷಕ ಸಂಗಮೇಶ ಸುಂಕದ್, ಈ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.