ಹೊನ್ನಾವರದಲ್ಲಿ ಉದ್ಘಾಟನೆಗೊಂಡ ನೂತನ ಹೆಲ್ತ್‌ ಕೇರ್‌ ಲ್ಯಾಬ್ – ಕೆಎಂಸಿ ಆಸ್ಪತ್ರೆ ಸೇವೆ ಲಭ್ಯ

ಮಂಗಳೂರಿನ ಕೆಎಂಸಿ ರಕ್ತ ತಪಾಸಣಾ ಪ್ರಯೋಗಾಲಯದಲ್ಲಿ ಯಾವೆಲ್ಲಾ ಸೌಲಭ್ಯಗಳಿದಿಯೋ ಆ ಎಲ್ಲಾ ಸೌಲಭ್ಯಗಳು ಉತ್ತರ ಕನ್ನಡ ಭಾಗದ ಜನತೆಗ ಪ್ರಯೋಜನವಾಗಲಿ ಅನ್ನೋ ಉದ್ದೇಶದಿಂದ ಹೊನ್ನಾವರದಲ್ಲಿ ಲ್ಯಾಬರೋಟರಿ ಸ್ಥಾಪಿಸಿದ ಕೆಎಂಸಿ. ಇದು ಉತ್ತರ ಕನ್ನಡಿಗರ ಬಹುದಿನದ ಬೇಡಿಕೆಯಾಗಿದ್ದ ಸೂಪರ್‌ ಸ್ಪಷಾಲಿಟಿ ಆಸ್ಪತ್ರೆಯ ಕೊರಗಿಗೆ ಮೊದಲ ಹೆಜ್ಜೆಯಾಗಿದೆ.

ಹೊನ್ನಾವರ, ಏಪ್ರಿಲ್‌ – 07,ಪಟ್ಟಣದ ತೆಲಂಗ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ನಿರ್ಮಿಸಿದ ಹೆಲ್ತ್‌ ಕೇರ್‌ ಲ್ಯಾಬ್‌ನ್ನು ಹಿರಿಯ ಪತ್ರಕರ್ತರಾದ ಜಿ.ಯು ಭಟ್‌ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು…ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರಾದ ಜಿ.ಯು ಭಟ್‌, ಡಾ. ನರಸಿಂಹ ಪೈ, ಕೆಎಂಸಿ ವೈದ್ಯರಾದ ಶಿವಾನಂದ ಪೈ ದೀಪ ಬೆಳೆಗಿಸುವ ಮೂಲಕ ಚಾಲನೆ ನೀಡಿದ್ರು.. ಬಳಿಕ ನೂತನ ಪ್ರಯೋಗಾಲಯ ಕೋಠಡಿಯನ್ನ ವೀಕ್ಷಿಸಿದ್ರು…

ಬಳಿಕ ಮಾತನಾಡಿದ ಕೆಎಂಸಿಯ ಹೃದ್ರೋಗ ತಜ್ಞರಾದ ನರಸಿಂಹ ಪೈ, ಮಂಗಳೂರಿನ ಕೆಎಂಸಿ ರಕ್ತ ತಪಾಸಣಾ ಪ್ರಯೋಗಾಲಯದಲ್ಲಿ ಯಾವೆಲ್ಲಾ ಸೌಲಭ್ಯಗಳಿದಿಯೋ ಆ ಎಲ್ಲಾ ಸೌಲಭ್ಯಗಳು ಉತ್ತರ ಕನ್ನಡ ಭಾಗದ ಜನತೆಗ ಪ್ರಯೋಜನವಾಗಲಿ ಅನ್ನೋ ಉದ್ದೇಶದಿಂದ ಹೊನ್ನಾವರದಲ್ಲಿ ಲ್ಯಾಬರೋಟರಿ ಸ್ಥಾಪಿಸಿದ್ದೇವೆ. ಜನತೆ ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದ್ರು..

ಇನ್ನೂಬ್ಬ ವೈದ್ಯ ಶಿವಾನಂದ ಪೈ ಮಾತನಾಡಿ, ಹೊನ್ನಾವರದಲ್ಲಿ ಮಂಗಳೂರಿನ ಕೆಎಂಸಿ ಸಂಸ್ಥೆಯಿಂದ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಒಳಗೊಂಡ ಲ್ಯಾಬರೋಟರಿ ಮಾಡಿಸಿ ಕೊಟ್ಟಿದ್ದಾರೆ. ಈ ಭಾಗದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ರು. ಇದು ಕೇವಲ ಲ್ಯಾಬ್‌ ಅಲ್ಲ. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿಕ್ಕೆ ಇದು ನಾಂದಿಯಾಗಲಿ ಎಂದು ಹೇಳಿದ್ರು. ಜೊತೆಗೆ ಹೊನ್ನಾವರದ ಜನತೆ ತುಂಬಾ ಮುಗ್ದರು, ಯಾಕೆಂದ್ರೆ ವೈದ್ಯರು ಏನೇ ಹೇಳಿದ್ರು ಅದನ್ನು ಸರಿಯಾಗಿ ಪಾಲಿಸುತ್ತಾರೆ. ಜೊತೆಗೆ ಅವರ ನಮ್ಮ ನಡುವಿನ ಬಾಂಧವ್ಯ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು..

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತರಾದ ಜಿ.ಯು ಭಟ್‌ ಅವರು ಮಾತನಾಡಿ, ಕೆಎಂಸಿ ವೈದ್ಯಕೀಯ ಸಂಸ್ಥೆಯ 5 ಸಾವಿರ ವೈದ್ಯರನ್ನು ಹೊಂದಿದ್ದು, ಉತ್ತಮ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದು, ತಾಲೂಕಿನಲ್ಲಿ ನೂತನ ಪ್ರಯೋಗಾಲಯ ನಿರ್ಮಾಣ ಮಾಡಿದ ಕೆಎಂಸಿಯ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ್ರು. ಇನ್ನೂ ಜಿಲ್ಲೆಯಲ್ಲಿ ಏನಾದ್ರೂ ತುರ್ತು ಚಿಕಿತ್ಸೆಗೆ ಬೇಕಾದ ಪ್ರಯೋಗಲಯ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಂತಾಯ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು ಇಲ್ಲಿಯೂ ಸಿಗುವಂತೆ ಮಾಡಿದ್ದಾರೆ. ಒಟ್ನಲ್ಲಿ ಬಹುದಿನದ ಬೇಡಿಕೆಯಾಗಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೊರಗಿಗೆ ಮೊದಲ ಹೆಜ್ಜೆಯಾಗಿ ಈ ಪ್ರಯೋಗಾಲಯ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದ್ರು..

ಇನ್ನು ಮಂಗಳೂರಿನ ಕೆಎಂಸಿ ಮತ್ತು ಗೋವಾ  ಕೆಎಂಸಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಗೀರ್‌ ಸಿದ್ದಕಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಆಸ್ಪತ್ರೆಯೊಂದಿಗೆ ಸೂಪರ್‌ ಸ್ಪೆಷಾಲಿಟಿ ಸೌಲಭ್ಯವನ್ನು ಕೊಡಲು ಮಂಗಳೂರಿನ ಕೆಎಂಸಿ ತೀರ್ಮಾನಿಸಿದ್ದು ಮೊದಲ ಹೆಜ್ಜೆಯಾಗಿ ಈ ಪ್ರಯೋಗಾಲಯ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಮಧ್ಯವರ್ತೀ ಸ್ಥಳದಲ್ಲಿ ಕೆಎಂಸಿ ಸೂಪರ್‌ ಸ್ಪೆಷಾಲಿಟಿ ತುರ್ತು ಸೇವಾ ಸೌಲಭ್ಯ ಉತ್ತರ ಕನ್ನಡಕ್ಕೆ ಸಿಗಲಿದೆ ಎಂದರು.

ಇನ್ನು ಈ ವೇಳೆ ಡಾ. ಸುನಯನಾ, ಡಾ. ರಾಜೇಶ್‌ ಕಿಣಿ, ಡಾ. ಶಿವಾನಂದ ಪೈ, ನರಸಿಂಹ ಪೈ ಹಾಗೂ ಕೆಎಂಸಿ ವೈದ್ಯರು, ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ರು…