ಹೊನ್ನಾವರ, ಏಪ್ರಿಲ್ 07 : ತಾಲ್ಲೂಕಿನ ಕೆರವಳ್ಳಿಯ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ಮತ್ತು ಪರಿವಾರ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು…
ಸಂತಾನಪ್ರಾಪ್ತಿಗಾಗಿ ಬರುವ ಭಕ್ತರ ಮನೋ ಇಚ್ಚೆ ಈಡೇರಿಸುವ ಕ್ಷೇತ್ರ ಇದಾಗಿದ್ದು, ರಾಜ್ಯದ ವಿವಿಧಡೆಯ ಅಪಾರ ಭಕ್ತರು ಪ್ರತಿವರ್ಷ ದೇವರ ದರ್ಶನ ಪಡೆಯಲು ಆಗಮಿಸುತ್ತಾರೆ. ಲಕ್ಷ್ಮೀ ಸಹಿತ ವೆಂಕ್ರಟಮಣ ಸಾನಿಧ್ಯ ಹೊಂದಿರುವ ಪೌರಾಣಿಕ ಹಿನ್ನಲೆ ಹೊಂದಿರುವ ಈ ಕ್ಷೇತ್ರವು ಪ್ರಸಿದ್ದವಾಗಿದೆ. ಇಂತಹ ದಿವ್ಯ ಕ್ಷೇತ್ರದ ಜೀರ್ಣೊದ್ದಾರಕ್ಕಾಗಿ ಉರಿನವರು ನಿರ್ಣಯಿಸಿ ವಿವಿಧ ಸಮಾಜ ಬಾದಂವರು ಭಕ್ತರೆಲ್ಲರು ಒಗ್ಗೂಡಿ ನಿರ್ಮಿಸಿದ ದೇವಾಲಯ ಲೋಕಾರ್ಪಣೆಗೊಂಡಿದೆ.
ವಿದ್ವಾನ್ ಸಾಂಬ ಗಣಪತಿ ಹಿರೇಗಂಗೆ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಚಂಡಿ ಪಾರಾಯಣ, ಬ್ರಹ್ಮಕೊರ್ಚ ಹೋಮ, ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಟೆ, ಶಿಖರ ಪ್ರತಿಷ್ಟೆ, ಚಂಡಿ ಹವನ ಪೂರ್ಣಾಹುತಿ, ಬ್ರಹ್ಮಕಲಶಾಭಿಷೇಕ ಮಹಾಪೂಜೆ, ಸಾಮೂಹಿಕ ಸತ್ಯನಾರಾಯಣ ವೃತ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ ಹೆಗಡೆ ಮೂಡ್ಕಣಿ, ಅರ್ಚಕ ಮನೆತನದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಂಜೆ ಭಜನಾ ಕಾರ್ಯಕ್ರಮ ಮತ್ತು ಕಲಾಶ್ರೀ ಯಕ್ಷಮಿತ್ರ ಮಂಡಳಿ ಕಲಾವಿದರಿಂದ ಭಕ್ತ ಸುಧನ್ವ ಯಕ್ಷಗಾನ ಜರುಗಿತು…