ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ 2 ದಿನಗಳ ʼಆಧ್ಯಾತ್ಮ ಚಿಂತನಾಮೃತʼ  

ಜೀವನದಲ್ಲೊಮ್ಮೆ ಶಾಂತಿ, ನೆಮ್ಮದಿ ಪದದ ಅರ್ಥವನ್ನು ನಿಜವಾಗಿ ಅನುಭವಿಸಬೇಕು ಅಂದ್ರೆ, ಒಮ್ಮೆಯಾದ್ರೂ ಈ ಕ್ಷೇತ್ರಕ್ಕೆ ಬರಲೇಬೇಕು. ಪ್ರಶಾಂತವಾದ ಸ್ಥಳ.. ಮೈಮನಗಳನ್ನು ಉಲ್ಲಾಸಗೊಳಿಸುವ ತಣ್ಣನೆಯ ಗಾಳಿ.. ಕಣ್ಣುಗಳಿಗೆ ಹಬ್ಬದೂಟ ಬಡಿಸುವ ಪ್ರಕೃತಿ ಮಡಿಲು.. ಈ ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ತಲೆಯೆತ್ತಿ ನಿಂತಿರುವ ಶ್ರೀ ಚೈತನ್ಯ ರಾಜಾರಾಮರ ಕ್ಷೇತ್ರ.. ಈ ಪರಮ ಪವಿತ್ರ ಕ್ಷೇತ್ರದಲ್ಲಿ ವಾತ್ಸಲ್ಯದ ಮೂರ್ತಿಯಂತಿರುವ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳ ಅಣಿಮುತ್ತು, ಜೀವನದಲ್ಲಿ ಕಳೆದುಹೋಗಿದ್ದು ಮತ್ತೆ ಸಿಕ್ಕ ಅನುಭವವನ್ನು ನೀಡುತ್ತೆ. ಇವು ಅನುಭವಿಸಿದವರೇ ಹೇಳಿದ ಮಾತುಗಳು..  

ಸಿದ್ಧಾಪುರ ಏಪ್ರಿಲ್‌ 03 : ಹೌದು.. ಅಪರೂಪದಲ್ಲಿ ಅಪರೂಪ ಎನಿಸುವಂತ ಈ ಕ್ಷೇತ್ರವಿರೋದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿ. ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳ ಸಾರಥ್ಯದಲ್ಲಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಬೇರೆಲ್ಲೂ ನಡೆಯದ ಅಪರೂಪದ ಕಾರ್ಯಕ್ರಮಗಳು ನಡೆಯುತ್ತಿರೋದು ಮತ್ತೊಂದು ವಿಶೇಷ…

ಯಾವುದೇ ಪ್ರಚಾರ ಬಯಸದೇ.. ಯಾವುದೇ ಪ್ರತಿಫಲಾಕ್ಷೇ ಇಲ್ಲದೇ ದಿನವಿಡಿ ಕಾರ್ಯನಿರ್ವಹಿಸುವ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು, ಸದಾ ಸಮಾಜದ ಹಿತ ಚಿಂತನೆಯಲ್ಲೇ ಇರುತ್ತಾರೆ. ಸನ್ಮಾರ್ಗವೇ ಭಗವಂತನೆಡೆಗೆ ಸಾಗುವ ಏಕೈಕ ಮಾರ್ಗ ಎನ್ನುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬ್ರಹ್ಮಾನಂದ ಭಾರತೀ ಶ್ರೀಗಳ ನಿಗರ್ವಿ ವ್ಯಕ್ತಿತ್ವ ಮತ್ತೊಮ್ಮೆ ಮಗದೊಮ್ಮೆ ಅವರ ಅಣಿಮುತ್ತುಗಳನ್ನು ಆಲಿಸಬೇಕು ಎನ್ನುವಂತೆ ಮಾಡುತ್ತೆ…

ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು ಕೇವಲ ಸಮಾಜದ ಹಿತ ಚಿಂತನೆ ಮಾಡುವದಷ್ಟೇ ಅಲ್ಲ.. ಆ ಚಿಂತನೆಯನ್ನು ಕಾರ್ಯರೂಪಕ್ಕೆ ತಂದಿರುವ ಅಪರೂಪದ ಶ್ರೀಗಳು. ಶ್ರೀ ರಾಜಾರಾಮ ಗೂರೂಜಿಯವರಿಂದ ಪ್ರಾರಂಭಗೊಂಡ ಮಾಸಿಕ ಸತ್ಸಂಗ, 25 ವರ್ಷಗಳನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಎರಡು ದಿನಗಳ ಆಧ್ಯಾತ್ಮ ಚಿಂತನ ಶಿಭಿರವನ್ನು ನಡೆಸುತ್ತಿದ್ದಾರೆ..

ಏಪ್ರಿಲ್‌ 20 (ಶನಿವಾರ) ಏಪ್ರಿಲ್‌ 21 (ಭಾನುವಾರ) ಸತ್ಸಂಗ ರಜತ ಮಹೋತ್ಸವದ ನಿಮಿತ್ತ ಆಧ್ಯಾತ್ಮ ಚಿಂತನಾಮೃತ ಶಿಬಿರವನ್ನು ನಡೆಸುತ್ತಿದ್ದಾರೆ. ಈ ಸತ್ಸಂಗದಲ್ಲಿ ಭಾಗವಹಿಸುವವರಿಗೆ ಶ್ರೀಗಳ ಆಣತಿಯಂತೆ ಯಾವುದೇ ಶುಲ್ಕವಿರುವುದಿಲ್ಲ. ವಸತಿ ವ್ಯವಸ್ಥೆ ಇದ್ದಲ್ಲಿ ಏಪ್ರಿಲ್‌ 15ರೊಳಗೆ 9886449689 ಈ ನಂಬರ್‌ಗೆ ಕರೆಮಾಡಿ ತಿಳಿಸಬೇಕು.

ಕಾರ್ಯಕ್ರಮ ವಿವರಗಳು:

20.04.2024.  ಶನಿವಾರ.

1) ಸಮಯ: ಬೆಳಿಗ್ಗೆ 9.30 ರಿಂದ 11:

ವಿಷಯ: ಜೀವನೋಪಾಯ ಮತ್ತು ಜೀವನದ ಗುರಿ

ಉಪನ್ಯಾಸ:  ಶ್ರೀ ನರಹರಿ ಹೆಗಡೆ. ಶಿರಳಗಿ

2) ಸಮಯ: ಬೆಳಿಗ್ಗೆ 11.30 ರಿಂದ 1.00: ವಿಷಯ: ಕೇನೋಪನಿಷತ್ತಿನ ಒಳನೋಟ.

ಉಪನ್ಯಾಸ: ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ. ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರ. ಶಿರಳಗಿ.

1 ರಿಂದ 2.30 ರವರೆಗೆ ಭೋಜನ ವಿರಾಮ.

3) ಮಧ್ಯಾಹ್ನ 2.30 ರಿಂದ 4.00: ವಿಷಯ: ಮೈತ್ರೇಯೀ- ಯಾಜ್ಞವಲ್ಕ್ಯ ರ ಸಂವಾದ .

ಉಪನ್ಯಾಸ: ವಿದ್ವಾನ್ ಶ್ರೀ ಮಹಾಬಲೇಶ್ವರ ಭಟ್ಟ, ಹಿರೇಕೈ.

4) ಮಧ್ಯಾಹ್ನ 4.30 ರಿಂದ 6.00:

ವಿಷಯ: ಅದ್ವೈತ, ದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲಿ ಸಾಮ್ಯತೆ ಮತ್ತು ವೈರುಧ್ಯ.

ಉಪನ್ಯಾಸ: ವಿದ್ವಾನ್ ಶ್ರೀ ಉಮಾಕಾಂತ ಭಟ್ಟರು ಕೆರೇಕೈ.

5) ಸಂಜೆ 6.30 ರಿಂದ 8.00:

ಶ್ರೀ ರಾಮನಾರಾಯಣ ಗುರುಕುಲ, ಬೆಂಗಳೂರು ಅರ್ಪಿಸುವ

ಶಾಸ್ತ್ರೀಯ ಸಂಗೀತ ಸೇವೆ:

ಹಾಡುಗಾರಿಕೆ: ಕುಮಾರಿ. ಸಂಹಿತಾ. ವಿ. ಅವಧಾನಿ.

ಪಿಟೀಲು: ಶ್ರೀ ಅಭಿರಾಮ್

ಮೃದಂಗ: ಶ್ರೀ ಬಿ.ಜೆ. ಶ್ರೀನಿವಾಸ್.

21.04.2024. ಭಾನುವಾರ .

1) ಬೆಳಿಗ್ಗೆ 9.30 ರಿಂದ 11.00:

ವಿಷಯ:

ಆನಂದ ಮೀಮಾಂಸೆ.

ಉಪನ್ಯಾಸ: ವಿದ್ವಾನ್ ಶ್ರೀ ಶಂಕರ ಭಟ್ಟರು ಬಾಲಿಗದ್ದೆ.

2) ಬೆಳಿಗ್ಗೆ 11.30 ರಿಂದ 1.00:

ವಿಷಯ: ಕಠೋಪನಿಷತ್ತಿನ ಹರಿಕಥಾ ರೂಪ.

ಪ್ರಸ್ತುತಿ: ವಿದ್ವಾನ್  ಶ್ರೀ ಶಂಕರ ಭಟ್ಟರು ಉಂಚಳ್ಳಿ.

ಮಧ್ಯಾಹ್ನ 1 ರಿಂದ 2.30 ಭೋಜನ ವಿರಾಮ.

3) ಮಧ್ಯಾಹ್ನ 2.30 ರಿಂದ 3.30:

ಪ್ರಶ್ನೋತ್ತರ.

ಉತ್ತರಿಸುವವರು: ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ. ಶಿರಳಗಿ

ಮತ್ತು ಶ್ರೀ ನರಹರಿ ಹೆಗಡೆಯವರು.

4) ಮಧ್ಯಾಹ್ನ. 4.00 ರಿಂದ 5.00: ಸಾಮೂಹಿಕ ಭಜನೆ.

5) ಸಂಜೆ 5.00 ರಿಂದ 6.00:

ಆಶೀರ್ವಚನ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲೀ ಮಹಾಸಂಸ್ಥಾನ. ಶಿರಸಿ.